22
Tuesday
April, 2025

A News 365Times Venture

ಕೋರ್ಟ್ ನಿಂದ ಸರ್ಕಾರಕ್ಕೆ ಛೀಮಾರಿ: ಸಿಎಂ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ- ಸ್ನೇಹಮಯಿ ಕೃಷ್ಣ

Date:

ಬೆಂಗಳೂರು, ಏಪ್ರಿಲ್,15,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಒತ್ತಾಯಿಸಿದರು.

ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆ ಮುಂದುವರೆಸಿ ಅಂತಿಮ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ. ಹಾಗೆಯೇ ಅಂತಿಮ ವರದಿ ಸಲ್ಲಿಸಿದ ನಂತರ ಬಿ ರಿಪೋರ್ಟ್ ಬಗ್ಗೆ ತೀರ್ಪು ನೀಡುವುದಾಗಿ ತಿಳಿಸಿ ವಿಚಾರಣೆಯನ್ನ ಮೇ 7ಕ್ಕೆ ಮುಂದೂಡಿಕೆ ಮಾಡಿತು.

ಈ ಕುರಿತು ಮಾತನಾಡಿದ ಸ್ನೇಹಮಯಿ ಕೃಷ್ಣ, ತನಿಖಾಧಿಕಾರಿಗಳಿಗೆ ತನಿಖೆಯ ಬಗ್ಗೆಯೇ ತಿಳಿದಿಲ್ಲ. ಸಿಎಂ ಕುಟುಂಬ ರಕ್ಷಿಸಲು ತನಿಖೆ ಪೂರ್ಣಗೊಳಿಸದೆ ವರದಿ ಸಲ್ಲಿಸಿದ್ದರು.  ಹೀಗಾಗಿ ಅಂತಿಮ ವರದಿ ಸಲ್ಲಿಕೆ ಮಾಡಲು ಕೋರ್ಟ್ ಸೂಚನೆ ನೀಡಿದೆ.  ಇಂದು ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದರು.

ಅಧಿಕಾರ ದುರುಪಯೋಗಪಡಿಸಿಕೊಂಡು ಕೇಸ್ ಮುಚ್ಚಿ ಹಾಕಲು ಯತ್ನಿಸಿದರೇ  ಆ ಪ್ರಯತ್ನಕ್ಕೆ ನಾನು ಅವಕಾಶ ಮಾಡಿ ಕೊಡುವುದಿಲ್ಲ.  ನನ್ನ ಬಳಿ ಇರುವ ದಾಖಲೆ ಇಟ್ಟಿಕೊಂಡು ಸಿಎಂಗೆ ಶಿಕ್ಷೆ ಕೊಡಿಸುತ್ತೇವೆ  ಸಿಎಂ ಮೊದಲು ರಾಜೀನಾಮೆ ಕೊಟ್ಟ ತನಿಖೆಗೆ ಸಹಕರಿಸಲಿ. ನನ್ನ ಹೋರಾಟ ಮುಂದುವರೆಸುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು.

Key words: Muda case,  Court, investigation, Snehamayi Krishna

The post ಕೋರ್ಟ್ ನಿಂದ ಸರ್ಕಾರಕ್ಕೆ ಛೀಮಾರಿ: ಸಿಎಂ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ- ಸ್ನೇಹಮಯಿ ಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Godavari Delta: 3 ప్రధాన కాలువలకు సాగునీటి సరఫరా నిలిపివేత.. మళ్లీ జూన్ ఒకటి నుంచి నీరు విడుదల!

తూర్పుగోదావరి జిల్లా గోదావరి డెల్టా పరిధిలోని మూడు ప్రధాన కాలువలకు ఈరోజు...

ರಾಜ್ಯದ ನಾಲ್ವರು ಸೇರಿ 7 ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಶಿಫಾರಸು

ನವದೆಹಲಿ,ಏಪ್ರಿಲ್,21,2025 (www.justkannada.in):   ಏಳು ಮಂದಿ ಹೈಕೋರ್ಟ್ ನ್ಯಾಯಾಧೀಶರನ್ನ ವರ್ಗಾವಣೆ ಮಾಡಲು...

മാർപാപ്പയുടെ വിയോഗം പക്ഷാഘാതവും ഹൃദയാഘാതവും കാരണം; പ്രസ്താവനയിറക്കി വത്തിക്കാൻ

വത്തിക്കാൻ സിറ്റി: ഫ്രാൻസിസ് മാർപാപ്പയുടെ വിയോഗം പക്ഷാഘാതവും ഹൃദയാഘാതവും മൂലമാണെന്ന് അറിയിച്ച്...