ಮೈಸೂರು,ಏಪ್ರಿಲ್,15,2025 (www.justkannada.in): ಮೈಸೂರು ಜಿಲ್ಲೆ ಬನ್ನೂರು ಮುಖ್ಯ ರಸ್ತೆಯಲ್ಲಿರುವ ಕಾವೇರಿ ನದಿಯ ಸೇತುವೆಯ ಬಳಿ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿ ಕಾವೇರಿ ನದಿಗೆ ಹಾರಿ ಬಿದ್ದಿದ್ದ ಆತನ ತಾಯಿಯ ಶವ ಪತ್ತೆಯಾಗಿದೆ.
ನಿನ್ನೆ ಸಂಭವಿಸಿದ ಅಪಘಾತದಲ್ಲಿ ಅಪಘಾತದಲ್ಲಿ ಬೈಕ್ ಸವಾರ ಶಂಕರ್(21) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದರು. ಆತನ ತಾಯಿ ಪಾರ್ವತಿ ದೇಹ ಕಾವೇರಿ ನದಿಗೆ ಬಿದ್ದಿತ್ತು. ಸತತ 15 ಗಂಟೆಗಳ ಕಾಲ ಮೃತ ದೇಹ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕೊನೆಗೂ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ಮೃತರು ಮೈಸೂರಿನ ಮೆಟಗಳ್ಳಿಯ ಕರಕುಶಲ ನಗರದ ನಿವಾಸಿಗಳೆಂದು ತಿಳಿದು ಬಂದಿದೆ. ತಾಯಿ ಮಗ ಒಂದೇ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿಯಾಗಿ ಅವಘಡ ಸಂಭಸಿತ್ತು. ಅಪಘಾತದಲ್ಲಿ ಬೈಕ್ ಸವಾರ ಶಂಕರ್(21) ಎಂಬಾತ ಸ್ಥಳದಲ್ಲೇ ಮೃತಪಟ್ಟಿರೇ ಆತನ ತಾಯಿ ಪಾರ್ವತಿ ದೇಹ ನದಿಗೆ ಹಾರಿ ಬಿದ್ದಿತ್ತು.
ನಿನ್ನೆ ಕತ್ತಲಾದ ಕಾರಣ ಶವ ಹೊರ ತೆಗೆಯಲಾಗಿರಲಿಲ್ಲ. ಇಂದು ಮೃತ ಪಾರ್ವತಿ ಶವಕ್ಕಾಗಿ ಶೋಧ ಕಾರ್ಯ ನಡೆಸಿ ಶವ ಹೊರ ತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Key words: Mysore, accident, son, death, mother, deabody, found
The post ಕಾರು- ಬೈಕ್ ಅಪಘಾತದಲ್ಲಿ ಪುತ್ರ ಸಾವು: ನದಿಗೆ ಹಾರಿಬಿದ್ದಿದ್ದ ತಾಯಿಯ ಶವ ಪತ್ತೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.