29
Tuesday
April, 2025

A News 365Times Venture

ನಮಗೆ ಸೇರಿದ ಜಾಗಕ್ಕೆ ಎಲ್ಲಾ ದಾಖಲೆಗಳಿವೆ: ನನ್ನ ಕಡೆಯಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಿಲ್ಲ- ಪ್ರಮೋದಾದೇವಿ ಒಡೆಯರ್

Date:

ಮೈಸೂರು, ಏಪ್ರಿಲ್,14,2025 (www.justkannada.in): ಚಾಮರಾಜನಗರ 5 ಸಾವಿರ ಎಕರೆ ಜಾಗದ ವಿಚಾರ ಸಂಬಂಧ ನಮಗೆ ಸೇರಿದ ಜಾಗಕ್ಕೆ ಎಲ್ಲಾ ದಾಖಲೆಗಳಿವೆ. ಆದರೆ ನನ್ನ ಕಡೆಯಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗಲ್ಲ. ಚಾಮರಾಜನಗರ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ರಾಜವಂಶಸ್ಥೆ  ಪ್ರಮೋದೇವಿ ಒಡೆಯರ್ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದೇವಿ ಒಡೆಯರ್, ಜನರಲ್ಲಿ  ಯಾಕೆ ಆತಂಕ ಸೃಷ್ಟಿ ಆಯಿತು ಗೊತ್ತಿಲ್ಲ. ನಮ್ಮ ಕಡೆಯಿಂದ ಎಲ್ಲಾ ದಾಖಲೆಗಳನ್ನು 2014 ರಲ್ಲೇ ಕೊಟ್ಟಿದ್ದೇವೆ. ಡಿಸಿ ಏನು ಗೊತ್ತಿಲ್ಲ ದಾಖಲೆ ಇಲ್ಲ ಅನ್ನೋಕೆ ಆಗಲ್ಲ. ನಾವು ಮೊನ್ನೆಯ ಕೂಡ ಜಾಗದ ಸಂಭಂದಪಟ್ಟ ದಾಖಲೆ ಕೊಟ್ಟಿದ್ದೇವೆ. ನಮಗೆ ಸೇರಿದ ಜಾಗಕ್ಕೆ ಎಲ್ಲಾ ದಾಖಲೆಗಳಿವೆ. ಅದನ್ನು ಕಂದಾಯ ಭೂಮಿ ಮಾಡಬೇಡಿ ಎಂದು ಮನವಿ ಮಾಡಿದ್ದೇವೆ. ಗ್ರಾಮಸ್ಥರು ಯಾರು ಆತಂಕ ಪಡಬಾರದು. ಏನೇ ಸಮಸ್ಯೆ ಇದ್ದರೂ ನಮ್ಮನ್ನು ಭೇಟಿ ಮಾಡಿ. ನಮ್ಮ ಕಚೇರಿಗೆ ಬನ್ನಿ ಎಂದು ತಿಳಿಸಿದರು

ಮಹಾರಾಜರು ಗಿಫ್ಟ್ ಕೊಟ್ಟಿರೋ ಭೂಮಿ ನಾವು ಕಿತ್ತುಕೊಳ್ಳುವ ಅವಶ್ಯಕತೆ ಇಲ್ಲ. ನಾನು ಈ ಹಿಂದೆಯೇ ಪತ್ರ ಬರೆದಿದ್ದೇವೆ. ಕಂದಾಯ ಗ್ರಾಮ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಅದಕ್ಕಾಗಿ ತಕರಾರು ಹಾಕಿದ್ದೇವೆ. ರಾಜರು ಗಿಫ್ಟ್ ಕೊಟ್ಟಿದ್ದರೆ  ಅವರ ಬಳಿ ಪತ್ರ ಇರತ್ತೆ. ನಾವು ಯಾರಿಗೂ ತೊಂದರೆ ಕೊಡಲ್ಲ. ಅಂತವರ ಜಾಗಕ್ಕೆ ನಾವು ಹೋಗಲ್ಲ. ಜನರು ಯಾವುದಕ್ಕೂ ಆತಂಕ ಪಡುವ ಅಗತ್ಯವಿಲ್ಲ. ನಮ್ಮ ಹೆಸರಿನ ಜಾಗದಲ್ಲಿ ಜನರು ಇದ್ದರು. ಅವರಿಗೆ ಉಳಲು ಜಮೀನು ಕೊಡುತ್ತೀವಿ. ಯಥಾಸ್ಥಿತಿ ಇರುವ ಹಾಗೆಯೇ ನೋಡಿಕೊಳ್ಳುತ್ತೇವೆ. ನನ್ನ ಕಡೆಯಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಿಲ್ಲ. ನಮ್ಮ ಭೂಮಿಯಲ್ಲಿ ಅವರಿದ್ದರು ನಾವು ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲ ಎಂದರು.

ರಾಜರಿಂದ ಗಿಫ್ಟ್ ಕೊಟ್ಟಿರೋ ದಾಖಲೆ ಇದ್ದರೆ ತೊಂದರೆ ಇಲ್ಲ. ಇಲ್ಲದಿದ್ದರೂ ಅಂತವರಿಗೆ ತೊಂದರೆ ಇಲ್ಲ. ಕಂದಾಯ ಗ್ರಾಮಕ್ಕೆ ನಮ್ಮ ವಿರೋಧವಿದೆ. ಅದರಲ್ಲಿ ನಮ್ಮ ಜಮೀನು ಇದೆ ಅಂತ ಅರ್ಜಿ ಹಾಕಿದ್ದೇವೆ. ನಮ್ಮ ಗಮನಕ್ಕೆ ಕಂದಾಯ ಗ್ರಾಮದ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ ಅದಕ್ಕಾಗಿ ತಕರಾರು ಅರ್ಜಿ ಹಾಕಿದ್ದೇವೆ ಎಂದು ಪ್ರಮೋದಾ ದೇವಿ ಒಡೆಯರ್ ತಿಳಿಸಿದರು.

ಚಾಮರಾಜನಗರದ ಜನರು ದಾಖಲೆಗಳಿದ್ದರೆ ಅರಮನೆಗೆ ಬಂದು ಕೊಡಲಿ. ಎಲ್ಲರನ್ನೂ ಮುಕ್ತವಾಗಿ ನೋಡುತ್ತೇವೆ. ಜನರಿಗೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಕಂದಾಯ ವ್ಯಾಪ್ತಿಗೆ ಯಾವ ಯಾವ ಜಮೀನು ಬರತ್ತೆ ಗೊತ್ತಿಲ್ಲ. ಜಿಲ್ಲಾಡಳಿತದಿಂದ ಯಾರು ಕೂಡ ಈ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ನಾವೇ ಡಿಸಿಗೆ ಒಂದು ಮೆಸೇಜ್ ಹಾಕಿದ್ದೇವೆ. ನನ್ನ ಮೆಸೇಜ್ ಗೆ ಡಿಸಿ ರಿಪ್ಲೇ ಕೂಡ ಮಾಡಿಲ್ಲ ಎಂದು ಪ್ರಮೋದ ದೇವಿ ಒಡೆಯರ್ ಹೇಳಿದರು.

ಜನರಲ್ಲಿ ಆತಂಕ ಸೃಷ್ಟಿ ಅದ ಬಳಿಕ ನಾವೇ ಜಿಲ್ಲಾಡಳಿತ ಸಂಪರ್ಕ ಮಾಡಿದ್ದೇವೆ. ಅವರು ನಮ್ಮ ಸಂಪರ್ಕ ಮಾಡಿಲ್ಲ. ನಮ್ಮ ಆಸ್ತಿ ಕ್ಲೈಮ್ ಮಾಡುತ್ತೇವೆ. ಜನರಿಗೆ ಗಿಫ್ಟ್ ಕೊಟ್ಟಿರುವ ಜಮೀನು ಬಗ್ಗೆ ಯಾವುದೇ ತಕರಾರು ಇಲ್ಲ. ಇದೇ ವಿಚಾರವಾಗಿ 2014 ರಿಂದ ಚಾಮರಾಜನಗರ ಜಿಲ್ಲಾಡಳಿತ ಯಾವುದೇ ಕಮ್ಯುನಿಕೇಷನ್ ಮಾಡಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದರು.

Key words: Chamarajnagar, 5 thousand acres, land,  records, Pramodadevi Wodeyar

 

The post ನಮಗೆ ಸೇರಿದ ಜಾಗಕ್ಕೆ ಎಲ್ಲಾ ದಾಖಲೆಗಳಿವೆ: ನನ್ನ ಕಡೆಯಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಿಲ್ಲ- ಪ್ರಮೋದಾದೇವಿ ಒಡೆಯರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೇಂದ್ರ ಸರ್ಕಾರ ಮಂಗಳಸೂತ್ರ, ಜನಿವಾರ ನಿಷೇಧ ಆದೇಶ ಹಿಂಪಡೆಯಲಿ: ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹ

ಬೆಂಗಳೂರು,ಏಪ್ರಿಲ್,28,2025 (www.justkannada.in):  ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಬೇಕು ಎಂದು...

ഉമ്മയും മൂത്താപ്പയും കൊല്ലപ്പെട്ടതെങ്ങനെയെന്ന് അദ്ദേഹം ഓര്‍ക്കണം, തീവ്രവാദമാണ് അവരുടെ മരണത്തിന് കാരണം; ബിലാവല്‍ ബൂട്ടോയ്‌ക്കെതിരെ ഒവൈസി

ശ്രീനഗര്‍: സിന്ധു നദീജല ജരാര്‍ നിര്‍ത്തിവെച്ചതിനെ തുടര്‍ന്ന് നദിയിലൂടെ വെള്ളമൊഴുകിയില്ലെങ്കില്‍ ഇന്ത്യക്കാരുടെ...

“அது நடந்தால் நாங்கள் அணு ஆயுதங்களை பயன்படுத்துவோம்'' – பாகிஸ்தான் பாதுகாப்புத் துறை அமைச்சர்

'இந்தியா - பாகிஸ்தானுக்கு இடையே போர் வந்துவிடுமா?' - ஜம்மு காஷ்மீர்...

YS Jagan: నేడు జిల్లాల అధ్యక్షులతో వైఎస్ జగన్ కీలక భేటీ..

YS Jagan: వైఎస్సాఆర్‌ కాంగ్రెస్ పార్టీకి చెందిన జిల్లాల అధ్యక్షులతో ఆ...