ಮೈಸೂರು,ಏಪ್ರಿಲ್,14,2025 (www.justkannada.in): ವಂಚಕರು ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ಇಬ್ಬರಿಗೆ ಆನ್ ಲೈನ್ ಮೂಲಕ ವಂಚಿಸಿ 1.52 ಕೋಟಿ ಪಂಗನಾಮ ಹಾಕಿರುವ ಘಟನ ಮೈಸೂರಿನಲ್ಲಿ ನಡೆದಿದೆ.
ಗಾಯತ್ರಿಪುರಂ ನಿವಾಸಿ ಹಾಗೂ ಕನಕದಾಸನಗರದ ನಿವಾಸಿಗಳಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ ಖದೀಮರು 1.52 ಕೋಟಿ ರೂ ವಂಚನೆ ಮಾಡಿದ್ದಾರೆ.
ಹೆಚ್ಚಿನ ಹಣದ ಆಸೆಗೆ ಬಿದ್ದ ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ಇಬ್ಬರು ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ವಂಚಕರು ಇನ್ ಸ್ಟಾಗ್ರಾಂ ಮೂಲಕ ಷೇರು ಮಾರುಕಟ್ಟೆಯ ವಿಡಿಯೋ ಪ್ರದರ್ಶನ ಮಾಡಿದ್ದು, ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ವಿಡಿಯೋ ನಂಬಿ ಮೆಸೇಜ್ ಮಾಡಿದಾಗ ಆಪ್ಸ್ ಟಾಕ್ಸ್ ವ್ಯಾಲ್ಯೂ ವಾಟ್ಸಾಪ್ ಗ್ರೂಪಿಗೆ ಜಾಯಿನ್ ಮಾಡಿದ್ದಾರೆ. ಆರಂಭದಲ್ಲಿ ಲಾಭ ತೋರಿಸಿದ ವಂಚಕರು ನಂತರ ಹಂತ- ಹಂತವಾಗಿ ಹಣ ಪಡೆದು ವಂಚನೆ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಅಂತ ಹೇಳಿ 11.80 ಲಕ್ಷ ರೂ. ಹಣ ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಲಾಗಿದೆ. ಮುಂಬೈ ಪೊಲೀಸ್ ಅಂತ ನಿವೃತ್ತ ಅಧಿಕಾರಿಗೆ ಕರೆ ಮಾಡಿದ ವಂಚಕರು ಕೆಲವು ಅಪರಾಧ ಕೃತ್ಯದಲ್ಲಿ ನೀವು ಭಾಗಿಯಾಗಿದ್ದೀರಿ. ನಿಮ್ಮ ಖಾತೆಗಳನ್ನ ಸೀಜ್ ಮಾಡಲಾಗುವುದು ಎಂದು ಎಂದು ಬೆದರಿಕೆ ಹಾಕಿ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರುಗಳು ದಾಖಲಾಗಿದೆ.
Key words: Online fraud, of Rs 1.52 crore, Complaint, Mysore
The post ಆನ್ ಲೈನ್ ಮೂಲಕ 1.52 ಕೋಟಿ ರೂ. ವಂಚನೆ: ದೂರು ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.