ಮಂಡ್ಯ,ಏಪ್ರಿಲ್,12,2025 (www.justkannada.in): ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಸಾಲು ಸಾಲು ಹಗರಣ ಆರೋಪ ಮಾಡಿರುವ ಬಿಜೆಪಿ, ಜೆಡಿಎಸ್ ವಿರುದ್ದ ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಕದಲೂರು ಉದಯ್, ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗು. ಬಿಜೆಪಿ ನಾಯಕರಿಗೆ ಲೂಟಿ ಮಾಡಿ ಅಭ್ಯಾಸವಿದೆ. ರಾಜ್ಯ ಸರ್ಕಾರದ ಜನಪ್ರೀಯತೆ ಸಹಿಸದೆ ಆರೋಪ ಮಾಡುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದರು.
ಪರ್ಸೆಂಟೇಜ್ ಬಗ್ಗೆ ಕಲಿಸಿಕೊಟ್ಟವರು ಬಿಜೆಪಿ ನಾಯಕರು. ನಿಜವಾಗಿ ಲೂಟಿ ಮಾಡಿದವರು ಬಿಜೆಪಿಯವರು. ಈಗ ಸರ್ಕಾರದ ವಿರುದ್ದ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ ಎಂದು ಶಾಸಕ ಕದಲೂರು ಉದಯ್ ಕಿಡಿಕಾರಿದರು.
Key words: JDS, sinking, ship, Congress MLA
The post ಜೆಡಿಎಸ್ ಮುಳುಗುತ್ತಿರುವ ಹಡಗು: ಬಿಜೆಪಿ ನಾಯಕರೇ ನಿಜವಾದ ಲೂಟಿಕೋರರು- ಕಾಂಗ್ರೆಸ್ ಶಾಸಕ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.