ಬೆಳಗಾವಿ,ಏಪ್ರಿಲ್,12,2025 (www.justkannada.in) : ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಎಂಎಲ್ ಸಿ ರವಿಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರವಿಕುಮಾರ್, ಈ ಹಿಂದೆ 1003 ರೂ ಇದ್ದ ಗ್ಯಾಸ್ ನಂತರ 800 ರೂ. ಗೆ ಇಳಿಕೆಯಾಗಿದೆ. ಸದ್ಯ ಸಿಲಿಂಡರ್ ದರ 50 ರೂ ಹೆಚ್ಚಳವಾಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಹೀಗಾಗಿ ಸಿದ್ದರಾಮಯ್ಯಗೆ ಕೇಂದ್ರ ಸರ್ಕಾರದ ವಿರುದ್ದ ಮಾತಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಜಾತಿಗಣತಿ ವರದಿ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರವಿಕುಮಾರ್, ಜಾತಿಗಣತಿ ಅಂಕಿ ಅಂಶಗಳನ್ನು ಮಂತ್ರಿಗಳಿಗೆ ಕೊಡಲಾಗುತ್ತೆ. ಸಣ್ಣ ಪುಟ್ಟ ಸಮುದಾಯಕ್ಕೆ ಅನ್ಯಾಯದಾಗುತ್ತೆ. ಜಾತಿ ಗಣತಿ ಬಗ್ಗೆ ಕಾಂಗ್ರೆಸ್ ಗೆ ಅಸಮಾಧಾನವಿದೆ ಎಂದು ಟೀಕಿಸಿದರು.
Key words: Price hike, CM, Siddaramaiah, MLC, Ravikumar
The post ಬೆಲೆ ಏರಿಕೆ ವಿಚಾರ: ಕೇಂದ್ರದ ವಿರುದ್ದ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ- ಎಂಎಲ್ ಸಿ ರವಿಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.