ಕೊಡಗು,ಏಪ್ರಿಲ್,4,2025 (www.justkannada.in): ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆಗೆ ಕಾಂಗ್ರೆಸ್ ಶಾಸಕ ಪೊನ್ನಣ್ಣ, ಮಂತರ್ ಗೌಡ, ಕಾಂಗ್ರೆಸ್ ಕಾರ್ಯಕರ್ತ ತೆನ್ನೀರ್ ಮೈನಾ ಕಾರಣ. ಈ ಮೂವರನ್ನ ಬಂಧಿಸಬೇಕು ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಆಗ್ರಹಿಸಿದರು.
ಡೆತ್ ನೋಟ್ ಬರೆದಿಟ್ಟು ಬಿಜೆಪಿ ಕಾರ್ಯಕರ್ತವಿನಯ್ ಆತ್ಮಹತ್ಯೆಗೆ ಶರಣಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಕೆ.ಜಿ ಬೋಪಯ್ಯ, ಕೊಡಗು ಜಿಲ್ಲಾ ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ವಿನಯ್ ವಿರುದ್ದ ರೌಡಿ ಶೀಟ್ ಓಪನ್ ಮಾಡಲು ತಯಾರಿ ನಡೆದಿತ್ತು. ವಿನಯ್ ಬಂಧನಕ್ಕೂ ಪೊಲೀಸರು ಮುಂದಾಗಿದ್ದರು ವಿನಯ್ ವಿರುದ್ದ ಎಫ್ ಐಆರ್ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ವಿನಯ್ ಗೆ ಧೈರ್ಯ ಹೇಳಿದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು
ವಿನಯ್ ಆತ್ಮಹತ್ಯೆಗೆ ಶಾಸಕ ಪೊನ್ನಣ್ಣ, ಮಂತರ್ ಗೌಡ, ಕಾಂಗ್ರೆಸ್ ಕಾರ್ಯಕರ್ತ ತೆನ್ನೀರ್ ಮೈನಾ ಕಾರಣ. ಮೂವರ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೆಜಿ ಬೋಪಯ್ಯ ಒತ್ತಾಯಿಸಿದರು. ಅಲ್ಲದೆ ಕಾಂಗ್ರೆಸ್ ದುರಾಡಳಿತದ ವಿರುದ್ದ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.
Key words: MLA, Ponnanna, Three arrest, former speaker, KG Bopaiah
The post ಶಾಸಕ ಎ.ಎಸ್ ಪೊನ್ನಣ್ಣ ಸೇರಿ ಮೂವರನ್ನ ಬಂಧಿಸಿ- ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.