6
Sunday
April, 2025

A News 365Times Venture

ಸೈಬರ್ ಅಪರಾಧಗಳನ್ನು ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು – ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಮಾದಯ್ಯ

Date:

ಮೈಸೂರು ಏಪ್ರಿಲ್ 02,2025 (www.justkannada.in):  ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಸೈಬರ್ ಅಪರಾಧಗಳನ್ನು ಪತ್ತೆಹಚ್ಚಿ ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಮಾದಯ್ಯ ಅವರು ತಿಳಿಸಿದರು.

ಇಂದು ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯನ್ನು ಪುಟ್ಟಮಾದಯ್ಯ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಏಕೀಕರಣದ ನಂತರ ಮೈಸೂರು ರಾಜ್ಯದಲ್ಲಿ ಪೊಲೀಸ್ ಧ್ವಜ ವಿಭಿನ್ನವಾಗಿದ್ದವು. ಅದನ್ನು ಮಾರ್ಪಡಿಸಿ 1960 ರಲ್ಲಿ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೊಳಿಸಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿ ಜಾರಿಗೊಳಿಸಲಾಯಿತು ಎಂದರು.

ಬೇರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಭಿನ್ನ. ಇಲ್ಲಿ ಕೆಲಸಕ್ಕೆ ನಿರ್ಧಿಷ್ಟ ಸಮಯ ಇರುವುದಿಲ್ಲ. ಎಲ್ಲಾ ಸಂದರ್ಭದಲ್ಲೂ ತಯಾರಿರಬೇಕು. ಆರೋಗ್ಯ ಸಮಸ್ಯೆಗಳೂ ಬೇಗ ಬರುತ್ತವೆ. ಹೀಗಾಗಿ ಆರೋಗ್ಯದ  ಬಗ್ಗೆ ಕಾಳಜಿ ಅಗತ್ಯ. ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುವ ರೀತಿ ಮುಖ್ಯ. ಈ ದಿನಗಳಲ್ಲಿ ರಾಜಕೀಯ ಗೊಂದಲ, ಸೈಬರ್ ಅಪರಾಧಗಳನ್ನು ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು. ನಿವೃತ್ತ ಅಧಿಕಾರಿಗಳ ಪಟ್ಟಿ ಠಾಣಾ ಮಟ್ಟದಲ್ಲಿ ನಿರ್ವಹಣೆ ಆಗಬೇಕು. ನಿವೃತ್ತರನ್ನು ಗೌರವಿಸಬೇಕು ಎಂದು ತಿಳಿಸಿದರು.

ಪ್ರಧಾನ ದಳಪತಿ ಸಹಾಯಕ ಕಮಾಂಡರ್ ರಾಜು.ಎಂ ತುಕಡಿಗಳ ಪರಿವೀಕ್ಷಣೆಗೆ ಕರೆದೊಯ್ದರು. ತೆರೆದ ವಾಹನದಲ್ಲಿ  ಪರಿವೀಕ್ಷಣೆ ಮಾಡಲಾಯಿತು. ನಗರ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ನಾಗರಿಕ ಪೊಲೀಸ್, ಸಂಚಾರ ವಿಭಾಗ, ಅಶ್ವರೋಹಿ ದಳದಿಂದ 10 ತಂಡಗಳಿಂದ ಪಥಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ನಗರ ಡಿಸಿಪಿ ಮುತ್ತುರಾಜ್, ಎಸ್.ಜಾಹ್ನವಿ, ಎಡಿಎಸ್ಪಿ ನಾಗೇಶ್, ಕಮಾಂಡೆಂಟ್ ಶೈಲೇಂದ್ರ,  ಕೆಪಿಎ ನಿರ್ದೇಶಕ ಚನ್ನಬಸವಣ್ಣ, ಸೆಸ್ಕಾಂ ನ ಎಎಸ್ಪಿ  ಸವಿತಾ ಹೂಗಾರ್  ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Key words: Young officers, strength, Handle, cyber crimes, Putta Madaiah

The post ಸೈಬರ್ ಅಪರಾಧಗಳನ್ನು ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು – ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಮಾದಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ: ಯಾರೇ ಕೆಪಿಸಿಸಿ ಅಧ್ಯಕ್ಷರಾದ್ರೂ ನಮಗೆ ಖುಷಿ- ಸಚಿವ ಈಶ್ವರ್ ಖಂಡ್ರೆ

ನವದೆಹಲಿ,ಏಪ್ರಿಲ್,4,2025 (www.justkannada.in): ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ಹಿನ್ನೆಲೆಯಲ್ಲಿ...

ഒഡീഷയില്‍ പള്ളിയില്‍ അതിക്രമിച്ച് കയറി പൊലീസ്; വൈദികന്‍ ഉള്‍പ്പെടെയുള്ളവര്‍ക്ക് മര്‍ദനമേറ്റു

ഭുവനേശ്വര്‍: ജബല്‍പൂരിന് പിന്നാലെ ഒഡീഷയിലും വൈദികന് നേരെ മര്‍ദനം. ബെഹരാംപൂര്‍ ലത്തീന്‍...

Modi TN Visit: `ராமேஸ்வரம், மதுரை' – பிரதமர் மோடியின் தமிழக விசிட்டும், தகிக்கும் அரசியல் களமும்

டெல்லிக்கு அ.தி.மு.க தலைவர்கள் படையெடுப்பு, பா.ஜ.க மாநிலத் தலைவர் மாற்றம் தொடர்பான பரபரப்பு,...

Off The Record : మాజీ ఎమ్మెల్యేలు జీవన్ రెడ్డి, షకీల్ గులాబీ పార్టీకి తలనొప్పిగా మారారా

ఆ మాజీ ఎమ్మెల్యేలు ఇద్దరూ.. గులాబీ పార్టీకి తలనొప్పిగా మారారా..? కేసుల్లో...