ಬೆಂಗಳೂರು,ಮಾರ್ಚ್,29,2025 (www.justkannada.in): ಗುತ್ತಿಗೆಯಲ್ಲಿ ಮುಸ್ಲೀಮರಿಗೆ 4% ಮೀಸಲಾತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಏಪ್ರಿಲ್ 10 ಬಳಿಕ ರಾಜ್ಯ ಪ್ರವಾಸ ಮಾಡಿ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಧರ್ಮದ ಆಧಾರದ ಮೀಸಲಾತಿ ಸಂವಿಧಾನ ವಿರೋಧಿ. ಹಿಂದೂ ವಿರೋಧಿ ನೀತಿ ಖಂಡಿಸುತ್ತೇವೆ. ಇದರ ವಿರುದ್ದ ಜನಜಾಗೃತಿ ಮೂಡಿಸಲು ತೀರ್ಮಾನ ಮಾಡಿದ್ದೇವೆ ಎಂದರು.
ಸದನದಲ್ಲಿ ಬಿಜೆಪಿ 18 ಶಾಸಕರ ಅಮನಾತು ವಾಪಸ್ ಪಡೆಯುವವರೆಗೆ ಪ್ರತಿಭಟನೆ ಮಾಡುತ್ತೇವೆ. ಏಪ್ರೀಲ್ 2ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತೇವೆ. ಶಾಸಕರು ಸಮಿತಿ ಸಭೆಗಳಲ್ಲಿ ಭಾಗಿಯಾಗಲ್ಲಎಂದು ಬಿವೈ ವಿಜಯೇಂದ್ರ ತಿಳಿಸಿದರು.
Key words: Reservation, Muslims, protest, BY Vijayendra
The post ಮುಸ್ಲೀಮರಿಗೆ ಮೀಸಲಾತಿ : ಏ.10ರ ಬಳಿಕ ರಾಜ್ಯ ಪ್ರವಾಸ ಮಾಡಿ ಹೋರಾಟ-ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.