2
Wednesday
April, 2025

A News 365Times Venture

ಎಂಎಸ್ ಐಲ್, ವಿವಿಧ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ಪೋರ್ಟಲ್‌ ತೆರೆಯಲು ಸಿದ್ದತೆ- ಸಚಿವ ಎಂ.ಬಿ.ಪಾಟೀಲ್

Date:

ಬೆಂಗಳೂರು,ಮಾರ್ಚ್,29,2025 (www.justkannada.in): ಸರಕಾರಿ ಸ್ವಾಮ್ಯದ ಎಂಎಸ್ಐಲ್, ವಿವಿಧ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ಪೋರ್ಟಲ್‌ ತೆರೆಯಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರದ ಜೆಮ್‌ ಪೋರ್ಟಲ್‌ ಮಾದರಿಯಲ್ಲಿ ರಾಜ್ಯ ಸರ್ಕಾರಿ ಸೇರಿದಂತೆ ಖಾಸಗಿ ಒಡೆತನದ ವಿವಿಧ ಉತ್ಪನ್ನಗಳ ಮಾರಾಟದ ಜತೆಗೆ ಖರೀದಿ ವ್ಯವಸ್ಥೆಗೂ ಇದು ವೇದಿಕೆಯಾಗಲಿದೆ.

ಈ ಸಂಬಂಧ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್  ಅವರು ಇಂದು ಎಂಎಸ್‌ ಐಎಲ್‌ನ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ವಿಸ್ತೃತವಾಗಿ ಚರ್ಚಿಸಿದರು. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಜಾರಿಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದರ ಕಾರ್ಯಾಚರಣೆಯನ್ನು ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ಕಾರ್ಯರೂಪಕ್ಕೆ ಬಂದರೆ ಸರಕಾರಿ ಇಲಾಖೆಗಳು ಯಾವುದೇ ಟೆಂಡರ್ ಇಲ್ಲದೆ ತಮ್ಮ ಇಲಾಖೆಗೆ ಬೇಕಾಗುವ ಸಾಮಗ್ರಿಗಳನ್ನು ಇದರ ಮೂಲಕವೇ ಖರೀದಿಸಬಹುದು. ಹಾಗೆಯೇ, ಮಾರಾಟ ಕೂಡ ಮಾಡಬಹುದು. ಕೇಂದ್ರ ಸರಕಾರದ ಮಟ್ಟದಲ್ಲಿ ಟೆಂಡರ್ ಇಲ್ಲದೆ ನೇರವಾಗಿ ಖರೀದಿಸಲು ಜೆಮ್ ಪೋರ್ಟಲ್ ಇದ್ದು, ಅದೇ ಮಾದರಿಯಲ್ಲಿ ಇದು ಕೂಡ ಕೆಲಸ ಮಾಡಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ವಿವರಿಸಿದರು.

ಮೊದಲ ಹಂತದಲ್ಲಿ ಕೇವಲ ಎಂಎಸ್‌ ಐಎಲ್‌ ಉತ್ಪನ್ನಗಳನ್ನು ಮಾರಾಟ ಮಾಡುವುದು. ಎರಡನೇ ಹಂತದಲ್ಲಿ ಮೈಸೂರು ಸ್ಯಾಂಡಲ್‌ ಸೋಪು, ಲಿಡ್ಕರ್‌ ಉತ್ಪನ್ನ, ಮೈಸೂರು ರೇಷ್ಮೆ ಬಟ್ಟೆ, ಕಾವೇರಿ ಎಂಪೋರಿಯಂ ಉತ್ಪನ್ನ, ನಂದಿನಿ ಉತ್ಪನ್ನ ಇತ್ಯಾದಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಇದರಲ್ಲಿ ಎಂಎಸ್‌ ಎಂಇ ಉತ್ಪನ್ನಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೂ ವೇದಿಕೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಮೂರನೇ ಹಂತದಲ್ಲಿ ಗ್ರಾಹಕ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ನಾಲ್ಕನೇ ಹಂತದಲ್ಲಿ ತಾಜಾ ಉತ್ಪನ್ನಗಳನ್ನು ಇ-ಕಾಮರ್ಸ್ ಮೂಲಕ ಮಾರಾಟ ಮಾಡುವ ಉದ್ದೇಶ ಇದೆ ಎಂದು ಅವರು ಹೇಳಿದ್ದಾರೆ.

ದೇಶದ ಇ-ಕಾಮರ್ಸ್ ವಹಿವಾಟು ಈಗ ವಾರ್ಷಿಕ 75 ಬಿಲಿಯನ್ ಡಾಲರ್ ಇದೆ. 2030ರ ಹೊತ್ತಿಗೆ ಇದು 350 ಬಿಲಿಯನ್ ಡಾಲರ್ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ನಮ್ಮಲ್ಲಿ ಈಗ 900 ಮಿಲಿಯನ್ ಇಂಟರ್ನೆಟ್ ಬಳಕೆದಾರರು ಇದ್ದಾರೆ. ಇವೆಲ್ಲವೂ ಇ-ಕಾಮರ್ಸ್ ಬೆಳವಣಿಗೆಗೆ ಪೂರಕವಾಗಿ ಒದಗಿ ಬರಲಿವೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ಎಂಎಸ್‌ ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್, ನಿರ್ದೇಶಕ ಚಂದ್ರಪ್ಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Key words: MSIL, open, e-commerce portal, sale, products, Minister, M.B. Patil

The post ಎಂಎಸ್ ಐಲ್, ವಿವಿಧ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ಪೋರ್ಟಲ್‌ ತೆರೆಯಲು ಸಿದ್ದತೆ- ಸಚಿವ ಎಂ.ಬಿ.ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Adilabad Airport : ఆదిలాబాద్ ఎయిర్ పోర్టుకు కేంద్రం గ్రీన్ సిగ్నల్

ఆదిలాబాద్ ఎయిర్ పోర్టుకు కేంద్రం గ్రీన్ సిగ్నల్ ఇచ్చింది. ఆదిలాబాద్ లో...

ಓವರ್ ಟೇ‍ಕ್ ಬರದಲ್ಲಿ KSRTC ಬಸ್ ಡಿಕ್ಕಿ: ಸೈಕಲ್ ಸವಾರ ಸಾವು

ಮೈಸೂರು,ಏಪ್ರಿಲ್ ,2,2025 (www.justkannada.in):  ಓವರ್ ಟೇಕ್ ಬರದಲ್ಲಿ ಕೆಎಸ್ ಆರ್...

ക്വിറ്റ് ഇന്ത്യ സമരത്തെ എതിര്‍ത്ത് ആര്‍.എസ്.എസ് മാപ്പെഴുതുമ്പോള്‍ മുസ്‌ലിങ്ങള്‍ രാജ്യത്തിന് വേണ്ടി പോരാടുകയായിരുന്നു: ഗൗരവ് ഗൊഗോയ്

ന്യൂദല്‍ഹി: വഖഫ് ഭേദഗതി ബില്ലില്‍ ബി.ജെ.പിക്കെതിരെ ആഞ്ഞടിച്ച് കോണ്‍ഗ്രസ് ലോക്‌സഭ ഡെപ്യൂട്ടി...

Waqf Bill: "இஸ்லாமியர் சொத்துக்களை அபகரிக்கும் முயற்சி" – நாடாளுமன்றத்தில் ஆ.ராசா பேச்சு

வக்ஃப் சட்டத் திருத்த மசோதா மீதான விவாதம் நாடாளுமன்றத்தில் நடைபெற்று வருகிறது....