ಮೈಸೂರು,ಮಾರ್ಚ್,29,2025 (www.justkannada.in): ನಾಳೆ ಯುಗಾದಿ ಹಬ್ಬ ಹಿನ್ನಲೆ ಹಸು ತೊಳೆಯಲು ಕೆರೆಗೆ ಹೋಗಿದ್ದ ಮೂವರು ನೀರು ಪಾಲಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಾಮನಹಳ್ಳಿಯಲ್ಲಿ ನಡೆದಿದೆ.
ವಿನೋದ್ (17)ಬಸವೇಗೌಡ (45)ಮುದ್ದೇಗೌಡ (48) ಮೃತಪಟ್ಟವರು. ನಾಳೆ ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 8.30 ಗಂಟೆ ವೇಳೆಗೆ ಮೂವರು ಹಸು ತೊಳೆಯಲು ಹೋಗಿದ್ದರು. ಈ ವೇಳೆ ನೀರುಪಾಲಾಗಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಮೃತರ ಕುಟುಂಬದಲ್ಲೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದಳ ಭೇಟಿ ನೀಡಿದ್ದು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ. ಕೆರೆಯಲ್ಲಿ ಈವರಗೆ ಮೃತದೇಹಗಳು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
Key words: Ugadi festival, Three people, Lake, death, water
The post ಯುಗಾದಿ ಹಬ್ಬದ ಸಂಭ್ರಮದಲ್ಲಿ ಸೂತಕದ ಛಾಯೆ : ಮೂವರು ನೀರು ಪಾಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.