ತುಮಕೂರು,ಮಾರ್ಚ್,28,2025 (www.justkannada.in): ಕಳೆದ 2024 ನವೆಂಬರ್ ತಿಂಗಳಿನಲ್ಲಿ ನನ್ನ ಕೊಲೆ ಯತ್ನಕ್ಕೆ ಸುಪಾರಿ ನೀಡಲಾಗಿತ್ತು ಎಂದು ಆರೋಪಿಸಿ ಸಚಿವ ಕೆ.ಎನ್ ರಾಜಣ್ಣಪುತ್ರ ಹಾಗೂ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರು ತುಮಕೂರಿನ ಎಸ್ ಪಿಗೆ ದೂರು ನೀಡಿದ್ದಾರೆ.
ಎಂಎಲ್ ಸಿ ರಾಜೇಂದ್ರ ರಾಜಣ್ಣ ಅವರು ತುಮಕೂರು ಎಸ್ಪಿ ಅಶೋಕ್ ವೆಂಕಟ್ ಅವರಿಗೆ ದೂರು ನೀಡಿದ್ದಾರೆ. ತುಮಕೂರಿನ ಎಸ್ಪಿ ಕಚೇರಿಗೆ ಭೇಟಿ ನೀಡಿ ರಾಜೇಂದ್ರ ದೂರು ಸಲ್ಲಿಸಿದ್ದಾರೆ. 2024ರ ನವೆಂಬರ್ ನಲ್ಲಿ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದಾರೆ. ಆಡಿಯೋ ಸಾಕ್ಷಿ ಸಹಿತ ದೂರು ನೀಡಿದ್ದಾರೆ ಎನ್ನಲಾಗಿದೆ.
ದೂರು ನೀಡಿದ ಬಳಿಕ ಮಾತನಾಡಿದ ಎಂಎಲ್ ಸಿ ರಾಜೇಂದ್ರ ರಾಜಣ್ಣ, ಸುಪಾರಿ ಟೀಮ್ ನಲ್ಲಿ 20 ಮಂದಿ ಇದ್ದಾರೆ. 70 ಲಕ್ಷಕ್ಕೆ ಸುಫಾರಿ ಪಡೆದಿದ್ದಾರೆ. 5 ಲಕ್ಷ ಮುಂಗಡವಾಗಿ ಪಡೆದಿದ್ದಾರೆ. ನನ್ನ ಮಗಳ ಬರ್ತಡೆ ದಿನ ಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ನಿನ್ನ ಡಿಜಿ &ಐಜಿಪಿಗೆ ದೂರು ನೀಡಿದ್ದೇನೆ. ಇಂದು ತುಮಕೂರು ಎಸ್ಪಿಗೆ ದೂರು ನೀಡಿದ್ದೇನೆ ಎಂದರು.
Key words: Attempt, murder, MLC, Rajendra Rajanna, complaint, SP
The post ಕೊಲೆಗೆ ಯತ್ನ ಆರೋಪ: ಎಸ್ಪಿಗೆ ದೂರು ನೀಡಿದ MLC ರಾಜೇಂದ್ರ ರಾಜಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.