31
Monday
March, 2025

A News 365Times Venture

ಮುಖ್ಯಮಂತ್ರಿ ಗಾದಿಗೇರಲು ಜೆಡಿಎಸ್‌ ಸಹಕಾರ ಕೋರಿದ್ರಾ ಜಾರಕಿಹೊಳಿ..?: ಜೆಡಿಎಸ್‌ ಶಾಸಕ ಜಿಟಿಡಿ ಅಚ್ಚರಿ ಹೇಳಿಕೆ.

Date:

ಮೈಸೂರು, ಮಾ.೨೭,೨೦೨೫: ಸಚಿವ ಸತೀಶ್ ಜಾರಕಿಹೊಳಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲು ಸಹಕಾರ ಕೋರಿ ಮಾಜಿ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದು ಜೆಡಿಎಸ್‌ ರೆಬಲ್‌ ಶಾಸಕ ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ  ಶಾಸಕ ಜಿ.ಟಿ ದೇವೇಗೌಡ ಹೇಳಿದಿಷ್ಟು..

ಸಚಿವ ಸತೀಶ್‌ ಜಾರಕಿಹೊಳಿಗೆ ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್ ಬೆಂಬಲ ಕೇಳಿರಬಹುದು. ಇರುವ 18 ಶಾಸಕರ ಬೆಂಬಲವನ್ನ ಸತೀಶ್ ಜಾರಕಿಹೊಳಿ ಕೇಳಿರಬಹುದು. ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು. ಸದ್ಯದ ಪರಿಸ್ಥಿತಿ ನೋಡಿದ್ರೆ ಅವರು ಬೇರೆ ಕಾರಣಕ್ಕೆ ಕುಮಾರಸ್ವಾಮಿ ಅವರನ್ನ ಭೇಡಿ ಮಾಡಿಲ್ಲ. ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದಾರೆ ಅಂದ್ರೆ ಅದಕ್ಕೆ ಇದೇ ಕಾರಣ.

ನಾನು ತಟಸ್ಥ:

ಒಂದು ವೇಳೆ ಜೆಡಿಎಸ್ ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ. ಈ ವಿಚಾರದಲ್ಲಿ ಮಾತ್ರ ಅಲ್ಲ ನಾನು ತಟಸ್ಥ ತಟಸ್ಥ ತಟಸ್ಥ. ಮೈಸೂರಿನಲ್ಲಿ ಜೆಡಿಎಸ್ ಹಿರಿಯ ಶಾಸಕ ಜಿ.ಟಿ ದೇವೇಗೌಡ ಹೇಳಿಕೆ.

ಯತ್ನಾಳ್‌ ಉಚ್ಛಾಟನೆ:

ಬಸನಗೌಡ ಯತ್ನಾಳ್ ಉಚ್ಚಾಟನೆ ವಿಚಾರ. ಅದು ಬಿಜೆಪಿಯ ಆಂತರಿಕ ವಿಚಾರ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಈ ಹಿಂದೆ ಅವರ ಬಗ್ಗೆ ಮಾತನಾಡಿದ್ದೆ. ಆಗ ಅವರೇ ಪೋನ್ ಮಾಡಿ ಮಾತನಾಡಿ ಸರಿ ಮಾಡಿಕೊಂಡರು. ಈಗ ನಮ್ಮ ಮಧ್ಯೆ ಏನೂ ಇಲ್ಲ. ಮೇಲಾಗಿ ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಮುಂದೆ ಇನ್ನೂ ಏನೇನು ಬೆಳವಣಿಗೆ ನಡೆಯುತ್ತೆ ಕಾದು ನೋಡೋಣ.

ಹನಿಟ್ರ್ಯಾಪ್ ವಿಚಾರ:

ಈ ಬಗ್ಗೆ ಸದನದಲ್ಲಿ ಸುನಿಲ್ ಕುಮಾರ್, ರಾಜಣ್ಣ ಮಾತನಾಡಿದ್ದಾರೆ. ಕರ್ನಾಟಕ ರಾಜಕಾರಣಕ್ಕೆ ಇತಿಹಾಸ ಇದೆ. ಇತ್ತೀಚಿನ ದಿನಗಳ ಘಟನೆ ನೋಡಿದ್ರೆ ಪ್ರಜಾಪ್ರಭುತ್ವ ವೇಗವಾಗಿ ಬೆಳೆಯುತ್ತಿದೆ. ಶಾಸಕ ಜಿಟಿ ದೇವೇಗೌಡ ವ್ಯಂಗ್ಯ. ಸದನದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರ ಚರ್ಚೆ ಆಗಬೇಕಿತ್ತು. ಕೇವಲ ಗಲಾಟೆ ಗದ್ದಲದಲ್ಲೇ ಸದನ ಮುಗಿಯುತು. ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಬಜೆಟ್ ಮಂಡನೆ ಮಾಡಿದ್ರು ಅಂತ ಜನತೆಗೆ ಗೊತ್ತಾಗಲೇ ಇಲ್ಲ. ಅಭಿವೃದ್ಧಿ ವಿಚಾರ ಚರ್ಚೆ ಆಗಿದ್ರೆ ಜನ ಖುಷಿ ಪಡ್ತಿದ್ರು. ಹನಿಟ್ರ್ಯಾಪ್ ಯಾಕೆ ಆಯ್ತು ಏನು ಎಂಬುದನ್ನ ತನಿಖೆ ಮಾಡಬೇಕು. ತನಿಖೆ ಮಾಡಿದಾಗಲೇ ಎಲ್ಲವು ತಿಳಿಯುತ್ತದೆ. ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಹೇಳಿಕೆ.

key words: Sathish Jarkiholi, JDS, chief minister, MLA GTD,Mysore

SUMMARY:

Has Jarkiholi sought JD(S)’s cooperation to become chief minister? : JD(S) MLA GTD makes a surprising statement.

The post ಮುಖ್ಯಮಂತ್ರಿ ಗಾದಿಗೇರಲು ಜೆಡಿಎಸ್‌ ಸಹಕಾರ ಕೋರಿದ್ರಾ ಜಾರಕಿಹೊಳಿ..?: ಜೆಡಿಎಸ್‌ ಶಾಸಕ ಜಿಟಿಡಿ ಅಚ್ಚರಿ ಹೇಳಿಕೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പ്രധാനമന്ത്രി മോദിയുടെ നേതൃത്വത്തെ വീണ്ടും പ്രശംസിച്ച് ശശി തരൂർ; ഇത്തവണ പ്രശംസ വാക്സിൻ നയതന്ത്രത്തിന്

ന്യൂദൽഹി: കേന്ദ്രസർക്കാരിനെ വീണ്ടും പ്രശംസിച്ച് മുതിർന്ന കോൺഗ്രസ് നേതാവ് ശശി തരൂർ....

"ரூ.85,000 கோடி முதலீட்டை தமிழ்நாடு இழந்திருக்கு..! " – கேள்வி எழுப்பும் அன்புமணி ராமதாஸ்

சீன கார் நிறுவனத்தின் ரூ.85,000 கோடி முதலீட்டை தமிழக அரசு இழந்துவிட்டதாக...

Kodali Nani: కొడాలి నానికి బైపాస్ సర్జరీ? ముంబైకి తరలించే అవకాశం..

కొడాలి నానిని ముంబై తరలించే అవకాశం ఉంది.. హార్ట్ స్టంట్ లేదా...

വീണ്ടും തെരുവിലായി ഫലസ്തീനി ജനത; അധിനിവേശ വെസ്റ്റ്ബാങ്കിലെ അഭയാര്‍ത്ഥി ക്യാമ്പുകള്‍ ഇസ്രഈല്‍ പൊളിച്ചുനീക്കുന്നു

വെസ്റ്റ്ബാങ്ക്: ഫലസ്തീന്‍ പൗരന്മാരെ അഭയാര്‍ത്ഥി ക്യാമ്പുകളില്‍ നിന്നും കുടിയൊഴിപ്പിക്കാന്‍ ഇസ്രഈല്‍ നീക്കം....