ಬೆಂಗಳೂರು,ಮಾರ್ಚ್ 26,2025 (www.justkannada.in): ಯಾವ ವೃತ್ತಿಯು ಕನಿಷ್ಠವಲ್ಲ, ಬದ್ಧತೆ, ಪರಿಶ್ರಮಗಳು ಕೈಗೊಳ್ಳುವ ವೃತ್ತಿಯ ಯಶಸ್ಸಿಗೆ ಕಾರಣವಾಗುತ್ತವೆ ಎಂದು ಖ್ಯಾನ ಚಲನಚಿತ್ರ ನಿರ್ದೇಶಕ ಟಿಎಸ್ ನಾಗಾಭರಣ ಹೇಳಿದರು.
37ನೇ ಕರ್ನಾಟಕ ರಾಜ್ಯ ಸನ್ನದ್ದು ಲೆಕ್ಕಪತ್ರಗಾರರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ತೊಡಗಿಸಿ ಕೊಳ್ಳಬಹುದಾದ ಕೆಲಸಗಳನ್ನು ಇಷ್ಟ ಪಟ್ಟು ಮಾಡುವುದರಿಂದ ಅನಗತ್ಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೆಯೇ ವೃತ್ತಿಯ ಯಶಸ್ಸಿಗೆ ಹೊಸ ಅವಿಷ್ಕಾರಗಳನ್ನು ಬಳಸುವುದನ್ನು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ಸಿ.ಎ ವಿಜಯಕುಮಾರ್ ಎಂ ಪಟೇಲ್ ಮಾತನಾಡಿ ವೃತ್ತಿಯಲ್ಲಿ ಎಐ ಬಳಕೆ ಕುರಿತ ಮಾರ್ಗದರ್ಶನ, ಟೂಲ್ ಲಭ್ಯತೆ, ಬಳಕೆ ಕುರಿತ ಮಾಹಿತಿಗಳು ಇನ್ನೂ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ಪ್ರೇರೇಪಣೆಯಾಗಲಿ ಎಂದರು.
ಸಮಾವೇಶದಲ್ಲಿ ಗಣ್ಯರಾದ ಪ್ರೊ ಡಾ ನಿಗಮ್ ಎಸ್ ನುಗ್ಗೇಹಳ್ಳಿ, ಸಂಘದ ಚೇರ್ಮನ್ ಸಿಎ ವಿಜಯಕುಮಾರ್ ಎಂ ಪಟೇಲ್, ವೈಸ್ ಚೇರ್ಮನ್ ಸಿಎ ಶಿವಪ್ರಕಾಶ್ ವಿರಕ್ತ ಮಠ, ಕಾರ್ಯದರ್ಶಿ ಸಿಎ ಪ್ರವೀಣ್ ಎಸ್ ಶೆಟ್ಟರ್ ಮತ್ತು ಗಣ್ಯರು ಉಪಸ್ಥಿತರಿದ್ದರು.
Key words: Success, career, possible, hard work , TS Nagabharana
The post ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸು ಸಾಧ್ಯ – ಟಿಎಸ್ ನಾಗಾಭರಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.