ಬೆಂಗಳೂರು,ಮಾರ್ಚ್,26,2025 (www.justkannada.in): ಬಿಜೆಪಿ ಕೇಂದ್ರಿಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಸ್.ಟಿ ಸೋಮಶೇಖರ್, ನಾನು ಕಾಂಗ್ರೆಸ್ ನ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ನಾನು ಪಕ್ಷದ ಶಿಸ್ತು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಟಿ ಸೋಮಶೇಖರ್, ನಾನು ಬೆಳಗಾವಿಯಲ್ಲಿ ಗಾಂಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ಸಚಿವರ ಜೊತ ಮಾತನಾಡುತ್ತೇನೆ ಡಿಕೆ ಶಿವಕುಮಾರ್ ಕ್ಷೇತ್ರಕ್ಕೆ ಬಂದರೆ ಭೇಟಿಯಾಗಿದ್ದೇನೆ. ಕಾಂಗ್ರೆಸ್ ನ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗಿಲ್ಲ. ಬಿಜೆಪಿಯವರೇ ಅಪಪ್ರಚಾರ ಮಾಡಿದ್ದಾರೆ ಇದು ಬಿಜೆಪಿ ಆರೋಪ ಅಷ್ಟೆ. ಕ್ಷೇತ್ರದ ವಿಚಾರಕ್ಕೆ ಮಂತ್ರಿಗಳನ್ನ ಭೇಟಿ ಮಾಡಲೇಬೇಕಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ನಾನು ಭಾಗವಹಿಸಿದ್ದೇನೆ. ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸಿಲ್ಲ ಪಕ್ಷದ ಶಿಸ್ತು ಉಲ್ಲಂಘಿಸಿಲ್ಲ ಬಜೆಟ್ ಸಭೆ ಬೆಂಗಳೂರು ಅಭಿವೃದ್ದಿ ಸಭೆಯಲ್ಲಿ ಭಾಗವಹಿಸಿದ್ದೆ ಎಂದರು.
ಬಿಜೆಪಿಗೆ ಮುಜುಗರ ಆಗುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ನಾನು ಬಿಜೆಪಿ ಯಾವ ನಾಯಕರ ವಿರುದ್ದವೂ ಮಾತನಾಡಿಲ್ಲ ಪಕ್ಷಕ್ಕೆ ಮುಜುಗರ ಮಾಡುವವರು ಬೇರೆಯವರು ಇದ್ದಾರೆ. ನನ್ನ ವಕೀಲರ ಜೊತೆ ಚರ್ಚಿಸಿ ಉತ್ತರ ಕೊಡುತ್ತೇನೆ. ನೋಟಿಸ್ ಗೆ ಉತ್ತರ ನೀಡುತ್ತೇನೆ ಎಂದು ಎಸ್ ಟಿ ಸೋಮಶೇಖರ್ ತಿಳಿಸಿದರು.
Key words: not violated, party, discipline, BJP ,MLA ,S.T. Somashekar
The post ನಾನು ಪಕ್ಷದ ಶಿಸ್ತು ಉಲ್ಲಂಘಿಸಿಲ್ಲ- ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.