29
Saturday
March, 2025

A News 365Times Venture

ಬೈಕ್ ಗೆ ಲಾರಿ ಡಿಕ್ಕಿಯಾಗಿ ಸವಾರ ಸಾವು: ಮೂವರು  SSLC ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

Date:

ವಿಜಯಪುರ,ಮಾರ್ಚ್,24,2025 (www.justkannada.in): ಬೈಕ್ ಗೆ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿ  ಮೂವರು  ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ತಾಲೂಕಿನ ಕಗ್ಗೊಡದ ಬಳಿ ಈ ಘಟನೆ ಸಂಭವಿಸಿದೆ. ವೆಂಕು ಚವ್ಹಾಣ (43) ಮೃತಪಟ್ಟವರು.  ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ವಿಜಯಪುರ ತಾಲೂಕಿನ ಕುಮಟಗಿ ತಾಂಡಾದಿಂದ ಕಗ್ಗೋಡದ ಎಸ್​​ಎಸ್​​ಎಲ್​ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದರು.

ವೆಂಕು ಚವ್ಹಾಣ  ಮೂವರು ವಿದ್ಯಾರ್ಥಿನಿಯರನ್ನು ಪರೀಕ್ಷಾ ಕೇಂದ್ರಕ್ಕೆ  ಬೈಕ್​ನಲ್ಲಿ ಕರೆದೊಯ್ಯುತ್ತಿದ್ದರು.  ವೆಂಕು ಅವರು ತಮ್ಮ ಇಬ್ಬರು ಮಕ್ಕಳಾದ ಐಶ್ವರ್ಯ, ಪ್ರೀತಿ ಜೊತೆಗೆ ಪಕ್ಕದ ಮನೆಯ ವಿದ್ಯಾರ್ಥಿನಿ ಶ್ವೇತಾಳನ್ನು ಕರೆದುಕೊಂಡು ಹೊರಟಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.

ಗಾಯಗೊಂಡ ಮೂವರು ವಿದ್ಯಾರ್ಥಿನಿಯರನ್ನು ವಿಜಯಪುರ ನಗರದ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ.  ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ಬಿಎಲ್​ಡಿಇ ಆಸ್ಪತ್ರೆಗೆ  ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಘಟನೆ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bike collides, lorry, three SSLC,  students, injured

The post ಬೈಕ್ ಗೆ ಲಾರಿ ಡಿಕ್ಕಿಯಾಗಿ ಸವಾರ ಸಾವು: ಮೂವರು  SSLC ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನಂದಿನಿ ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ಮೈಮುಲ್ ಅಧ್ಯಕ್ಷರು

ಮೈಸೂರು,ಮಾರ್ಚ್,29,2025 (www.justkannada.in): ಹಾಲಿನ ದರವನ್ನ 4 ರೂ. ಹೆಚ್ಚಳ ಮಾಡಿರುವ...

അങ്കണവാടി ജീവനക്കാരുടെ സമരം പിന്‍വലിച്ചു

തിരുവനന്തപുരം: സെക്രട്ടറിയേറ്റിന് മുമ്പിലെ അങ്കണവാടി ജീവനക്കാരുടെ സമരം പിന്‍വലിച്ചു. ധനമന്ത്രി കെ.എന്‍.ബാലഗോപാലുമായി...

எடப்பாடி பழனிசாமியைத் தொடர்ந்து செங்கோட்டையன்; டெல்லிக்குப் படையெடுக்கும் அதிமுக தலைவர்கள்

2021 சட்டமன்றத் தேர்தலில் பா.ஜ.க வுடன் கூட்டணி வைத்திருந்த எடப்பாடி...

Gold Rates: పసిడి ప్రియులకు వరుస షాక్‌లు.. మళ్లీ పెరిగిన గోల్డ్ రేట్స్!

పసిడి ప్రియులకు షాకింగ్ న్యూస్. వరుసగా బంగారం ధరలు షాకిస్తున్నాయి. గత...