27
Thursday
March, 2025

A News 365Times Venture

UNIVERSITY OF MYSORE: ಬಜೆಟ್ ಸಭೆ ಕರೆಯುವಂತೆ ಸೂಚಿಸಿ, ರಾಜ್ಯಪಾಲರ ಮೊರೆ ಹೋದ ಸಿಂಡಿಕೇಟ್ ಸದಸ್ಯ

Date:

ಮೈಸೂರು, ಮಾ.23, 2025: ಮೈಸೂರು ವಿಶ್ವವಿದ್ಯಾನಿಲಯದ 2025 -26ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಬಜೆಟ್ (ಆಯವ್ಯಯ)  ಅಂದಾಜುಗಳನ್ನು ಚರ್ಚಿಸಿ ಮತ್ತು ಅನುಮೋದಿಸಲು 31 ಮಾರ್ಚ್ 2025 ಕ್ಕೆ ಮುನ್ನ ತುರ್ತು ಸಿಂಡಿಕೇಟ್ ಸಭೆ ಕರೆಯಲು ಸೂಚಿಸುವಂತೆ ಕೋರಿ ರಾಜ್ಯಪಾಲರಿಗೆ ಪತ್ರ.

ಮೈಸೂರು ವಿವಿ ಸಿಂಡಿಕೇಟ್ ಗೆ ರಾಜ್ಯಪಾಲರಿಂದ ನಾಮ ನಿರ್ದೇಶನಗೊಂಡಿರುವ  ಸದಸ್ಯ ಡಾ.ಟಿ.ಆರ್. ಚಂದ್ರಶೇಖರ್ ಅವರು ಈ ಬಗ್ಗೆ ಪತ್ರ ಬರೆದಿದ್ದು ಬಜೆಟ್ ಸಭೆ ಕರೆಯುವಂತೆ ಕುಲಸಚಿವರಿಗೆ ನಿರ್ದೇಶನ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಈಗಾಗಲೇ ಮೈಸೂರು ವಿವಿ ಕುಲಸಚಿವರಿಗೆ ಪತ್ರ ಬರೆದು ಬಜೆಟ್ ಸಭೆ ಕರೆಯುವಂತೆ ವಿನಂತಿಸಿದ್ದೆ. ಆದರೆ ಆ ಪತ್ರಕ್ಕೆ ಇದುವರೆವಿಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷವೂ ಇದೇ ರೀತಿ ಕಾನೂನು ಉಲ್ಲಂಘನೆಯಾಗಿತ್ತು ಎಂಬ ಅಂಶವನ್ನು ಸಹ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಕುಲಸಚಿವರಿಗೆ ಬರೆದಿರುವ ಪತ್ರದ ಪ್ರತಿಯನ್ನು ಸಹ ಲಗತ್ತಿದ್ದಾರೆ.

ಕುಲಸಚಿವರಿಗೆಬರೆದ ಪತ್ರದ ಒಟ್ಟಾರೆ ಸಾರಾಂಶ..

109 ವರ್ಷಗಳ ಇತಿಹಾಸವುಳ್ಳ ನಮ್ಮ ಹೆಮ್ಮೆಯ ಮೈಸೂರು ವಿಶ್ವವಿದ್ಯಾನಿಲಯದ “ಸಿಂಡಿಕೇಟ್‌ನ ಜವಾಬ್ದಾರಿಯುತ ಸದಸ್ಯನಾಗಿ”, ನಿಯಮದ ಪ್ರಕಾರ, 2025-26 ರ ಬಜೆಟ್ ಅಂದಾಜುಗಳನ್ನು ಮಾರ್ಚ್ 31, 2025 ರ ಮೊದಲು ಸಿಂಡಿಕೇಟ್‌ನಲ್ಲಿ ತಯಾರಿಸಿ, ಮಂಡಿಸಿ ಮತ್ತು ಅನುಮೋದಿಸಬೇಕು ಎಂದು ನಾನು ಬಲವಾಗಿ ನಂಬುತ್ತೇನೆ. ಹಾಗೂ ಇದೇ ಭರವಸೆಯನ್ನು ಕಳೆದ ವರ್ಷದ ಆರ್ಥಿಕ ವರ್ಷದ ಆಯವ್ಯಯ ಅಂದಾಜುಗಳ ಅನುಮೋದನೆಯ ಸಭೆಯಲ್ಲಿ, ಮಾನ್ಯ ಹಣಕಾಸು ಅಧಿಕಾರಿಗಳು ಮತ್ತು ಕುಲಪತಿಗಳು ಹಾಗೂ ಕುಲ ಸಚಿವರು ಸಭೆಗೆ ಭರವಸೆ ನೀಡಿ, ಮುಂದಿನ 2025 26ರ ಬಜೆಟ್ ಅಂದಾಜುಗಳನ್ನು ಕಾನೂನು ಪ್ರಕಾರ ಫೆಬ್ರವರಿ ಮಾರ್ಚ್ ತಿಂಗಳ ಅವಧಿಯಲ್ಲಿ ಮಂಜೂರಾತಿ ಪಡೆಯುವುದಾಗಿ ಸಭೆಗೆ ಭರವಸೆ ನೀಡಿದ ಕಾರಣ ಅಂದಿನ ಆಯವ್ಯಯವನ್ನು ಸಿಂಡಿಕೇಟ್ ಅನುಮೋದಿಸಿರುತ್ತದೆ ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಒಂದು ವೇಳೆ ತಾವುಗಳು ನಿಯಮದ ಪ್ರಕಾರ 2025 26ರ ಆರ್ಥಿಕ ವರ್ಷದ ಆಯವ್ಯವನ್ನು 31 3 2025ರ ಒಳಗಾಗಿ ಅನುಮೋದಿಸದೇ, ಕಳೆದ ವರ್ಷದಂತೆ ಈ ಸಲವೂ ತಪ್ಪು ಮಾಡಿ, ತಡವಾಗಿ ಅಂದರೆ 1 ನೇ ಏಪ್ರಿಲ್ 2025ರ ನಂತರ ಬಜೆಟ್ ಮಂಡಿಸಿದರೆ ಅದಕ್ಕೆ ನನ್ನ ಅಸಮತಿ ಇದ್ದು ಸದರಿ ಉಲ್ಲಂಘನೆ ಮತ್ತು ದೋಷಗಳನ್ನು,  ರಾಜಪಾಲರು ಮತ್ತು ರಾಜ್ಯದ ಹಣಕಾಸು ಮಂತ್ರಿಗಳಾದ ಮುಖ್ಯಮಂತ್ರಿಗಳು, ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡುವುದಾಗಿ  ಡಾ. ಟಿ ಆರ್ ಚಂದ್ರಶೇಖರ್ ಪತ್ರದಲ್ಲಿ ತಿಳಿಸಿದ್ದಾರೆ.

KEY WORDS: UNIVERSITY OF MYSORE, Syndicate member, governor, UOM Vice Chancellor ,  budget meeting.

SUMMARY: 

UNIVERSITY OF MYSORE: Syndicate member  writes a letter to the governor, to direct UOM Vice Chancellor to convene a budget meeting.

 

The post UNIVERSITY OF MYSORE: ಬಜೆಟ್ ಸಭೆ ಕರೆಯುವಂತೆ ಸೂಚಿಸಿ, ರಾಜ್ಯಪಾಲರ ಮೊರೆ ಹೋದ ಸಿಂಡಿಕೇಟ್ ಸದಸ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಹನಿಟ್ರ್ಯಾಪ್ ಕೇಸ್: PIL ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ,ಮಾರ್ಚ್,26,2025 (www.justkannada.in): ರಾಜ್ಯದಲ್ಲಿ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ ವಿಚಾರ ದೇಶದಲ್ಲಿ...

കേരളം അങ്ങനെ അംഗികരിക്കപ്പെടേണ്ടതില്ലെന്ന ചിന്ത നാടിനെതിരായത്; യു.എസ് സന്ദര്‍ശനാനുമതി നിഷേധിച്ച കേന്ദ്ര സര്‍ക്കാര്‍ നടപടിയില്‍ പി.രാജീവ്

തിരുവനന്തപുരം: യു.എസ് സന്ദര്‍ശനത്തിന് അനുമതി നിഷേധിച്ച കേന്ദ്ര വിദേശകാര്യ മന്ത്രാലയത്തിന്റെ നടപടിയില്‍...

Harish Rao : ప్రతిపక్షం గొంతు నొక్కే ప్రయత్నం.. సీఎం పై హరీశ్ రావు ధ్వజం

Harish Rao : తెలంగాణ రాజకీయాల్లో తీవ్ర చర్చనీయాంశంగా మారిన...