ಬೆಂಗಳೂರು,ಮಾರ್ಚ್,22,2025 (www.justkannada.in): ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿರುವ ಬಂದ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನಾರ್ಯಾಲಿಗೆ ಮುಂದಾದರು. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಫ್ರೀಡಂಪಾರ್ಕ್ ವರೆಗೂ ಕನ್ನಡ ಪರಸಂಘಟನೆಗಳು ಪ್ರತಿಭಟನಾರ್ಯಾಲಿ ಹಮ್ಮಿಕೊಂಡಿದ್ದವು.
ಆದರೆ ಟೌನ್ ಹಾಲ್ ಬಳಿಯೇ ಪೊಲೀಸರು ಪ್ರತಿಭಟನಾನಿರತ ವಾಟಾಳ್ ನಾಗರಾಜ್, ಸಾ.ರಾ ಗೋವಿಂದು ಸೇರಿ ಕನ್ನಡಪರ ಹೋರಾಟಗಾರರನ್ನ ವಶಕ್ಕೆ ಪಡೆದು ಬಸ್ ನಲ್ಲಿ ಕರೆದೊಯ್ದರು. ಈ ವೇಳೆ ಪೊಲೀಸರು ಪ್ರತಿಭಟೆ ಹತ್ತಿಕ್ಕುತ್ತಿದ್ದಾರೆ. ಸರ್ಕಾರ ಮರಾಠಿ ಏಜೆಂಟ್ ಎಂದು ಸರ್ಕಾರದ ವಿರುದ್ದ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
Key words: Karnataka Bandh, Kannada activists, Vatal Nagaraj, protest
The post ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಸೇರಿ ಕನ್ನಡಪರ ಹೋರಾಟಗಾರರು ವಶಕ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.