ಮೈಸೂರು,ಮಾರ್ಚ್,20,2025 (www.justkannada.in): ಚಾಮಯ್ಯ ಮೇಷ್ಟ್ರು ಎಂದೇ ಕನ್ನಡ ಚಿತ್ರ ರಸಿಕರಲ್ಲಿ ಚಿರಪರಿಚಿತರಾದ ಕನ್ನಡದ ಮೇರು ನಟ ಕೆ.ಎಸ್ ಅಶ್ವಥ್ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಮಾರ್ಚ್ 25 ರಂದು ಮೈಸೂರಿನ ಕಲಾಮಂದಿರದಲ್ಲಿ ಆಯೋಜನೆ ಮಾಡಲಾಗಿದೆ .
18/01/1925 ರಲ್ಲಿ ಜನಿಸಿದ ಕೆ.ಎಸ್ ಅಶ್ವಥ್ 2010 ಜನವರಿ 18 ರಂದು ನಿಧನರಾದರು. ಕೆಎಸ್ ಅಶ್ವಥ್ ಅವರ ಬಂಧುಬಳಗ ಮತ್ತು ಹಿತೈಷಿಗಳ ವತಿಯಿಂದ ಮಾರ್ಚ್ 25 ರಂದು ಸಂಜೆ 4.30 ಕ್ಕೆ ಕಲಾಮಂದಿರದಲ್ಲಿ ಜನ್ಮ ಶತಮಾನ ದಿನೋತ್ಸವ ಜರುಗಲಿದೆ.
ಕಾರ್ಯಕ್ರಮಕ್ಕೆ ಹಿರಿಯ ನಟರಾದ ಶ್ರೀನಾಥ್, ರವಿಚಂದ್ರನ್, ದೊಡ್ಡಣ್ಣ, ಪತ್ರಕರ್ತರಾದ ರಂಗನಾಥ್ ಭಾರದ್ವಾಜ್, ರಂಗಕರ್ಮಿ ರಾಜಶೇಖರ್ ಕದಂಬ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಇದೇ ವೇಳೆ ಅಶ್ವಥ್ ಅವರ ಫೋಟೋ ಗ್ಯಾಲರಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮವೂ ಇರುತ್ತದೆ ಎಂದು ರಂಗಕರ್ಮಿ ರಾಜಶೇಖರ್ ಕದಂಬ ಮತ್ತು ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಮಾಹಿತಿ ನೀಡಿದರು.
ಅಶ್ವಥ್ ಅವರ ಜನ್ಮ ಶತಮಾನೋತ್ಸವವನ್ನ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದಲೇ ಮಾಡಬೇಕಿತ್ತು. ಕನ್ನಡ ಚಿತ್ರರಂಗಕ್ಕೆ ಅಶ್ವಥ್ ಅವರ ಕೊಡುಗೆ ಏನು ಅಂತ ಎಲ್ಲರಿಗೂ ಆದರೂ ಎಲ್ಲೋ ಒಂದು ಕಡೆ ಅಶ್ವಥ್ ಅವರಿಗೆ ಸೂಕ್ತ ಗೌರವ ನೀಡಿಲ್ಲ ಎಂದು ರಂಗಕರ್ಮಿ ರಾಜಶೇಖರ್ ಕದಂಬ ಅಸಮಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶಂಕರ್ ಅಶ್ವಥ್, ವಾತಾವರಣಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಬೇಕು. ಯಾರ ಮೇಲೂ ಆರೋಪ ಮಾಡಬಾರದು. ಆರೋಪ ಮಾಡಿ ಏನೂ ಪ್ರಯೋಜನ ಇಲ್ಲ. ಬದಲಾವಣೆಗೆ ನಾವು ಹೊಂದಿಕೊಂಡು ಹೋಗಬೇಕು ಎಂದರು.
Key words: Birth centenary, Kannada actor, K.S. Ashwath, mysore
The post ಮಾ.25ರಂದು ಕನ್ನಡದ ಮೇರು ನಟ ಕೆ.ಎಸ್ ಅಶ್ವಥ್ ಜನ್ಮ ಶತಮಾನೋತ್ಸವ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.