19
Wednesday
March, 2025

A News 365Times Venture

ಕೇಂದ್ರ ಸರ್ಕಾರ ಕರ್ನಾಟಕ ಮಾದರಿಯಲ್ಲೇ SCP, TSP ಕಾಯ್ದೆ ಜಾರಿ ಮಾಡಲಿ- ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು,ಮಾರ್ಚ್,17,2025 (www.justkannada.in): ಕೇಂದ್ರ ಸರ್ಕಾರ 4820512 ಕೋಟಿ ಬಜೆಟ್ ಗಾತ್ರದಲ್ಲಿಎಸ್.ಸಿ. ಪಿ / ಟಿ ಎಸ್ ಪಿ ಗಾಗಿ 138368 ಇದ್ದು 2.87% ಮೀಸಲಿಟ್ಟಿದೆ. ಕರ್ನಾಟಕ ಮಾದರಿಯಲ್ಲೇ ಕೇಂದ್ರ ಸರ್ಕಾರ ಎಸ್.ಸಿ. ಪಿ/ ಟಿ ಎಸ್ ಪಿ ಕಾಯ್ದೆ ಜಾರಿ ಮಾಡಲಿ ಎಂದು ಸರ್ವಾನುಮತದ ನಿರ್ಣಯ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ  ಕರೆ ನೀಡಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಲಿತ ಸಮುದಾಯಕ್ಕೆ ಗುಜರಾತ್ ಬಿಜೆಪಿ ಸರ್ಕಾರ 2.38% ರಷ್ಟು, ಮಹಾರಾಷ್ಟ್ರ 3.6% ಹಾಗೂ ಕೇಂದ್ರ ಸರ್ಕಾರ ಕೇವಲ 2.87% ಮಾತ್ರ ಹಣ ಬಜೆಟ್ ನಲ್ಲಿ ತೆಗೆದಿಟ್ಟಿದೆ. ಆದರೆ ಕಾಂಗ್ರೆಸ್ ಸರ್ಕಾರ ಶೇ7.46 ರಷ್ಟು ಹಣ ಮೀಸಲಿಟ್ಟು ಖರ್ಚು ಮಾಡಿದೆ. ಬಿಜೆಪಿ ಎಸ್.ಸಿ. ಪಿ / ಟಿ ಎಸ್ ಪಿ ಕಾಯ್ದೆಯಡಿ 5 ವರ್ಷಗಳಲ್ಲಿ 35,464 ಕೋಟಿ ಅನುದಾನ ಹಂಚಿಕೆ ಮಾಡಿ 22,480 ಕೋಟಿ ವೆಚ್ಚ ಮಾಡಿದ್ದಾರೆ. ಈ ಕಾಯ್ದೆ ಬಂದದ್ದಕ್ಕೆ ಜನಸಂಖ್ಯೆ ಅನುಸಾರವಾಗಿ ಹಣ ವೆಚ್ಚ ಮಾಡಬೇಕು. 17.15% ಪ.ಜಾತಿ, ಪ.ವರ್ಗ 6.95% ಎರಡೂ ಸೇರಿ 24.1% ಇದ್ದಾರೆ. ಯೋಜನೆಯ  ಹಣದಲ್ಲಿ 24.1 %  ಕೂಡಲೇಬೇಕು. ಮೊದಲು ಅಷ್ಟು ಖರ್ಚು ಮಾಡುತ್ತಿರಲಿಲ್ಲ. ಒಂದು ವೇಳೆ ಹಣವನ್ನು ಖರ್ಚು ಮಾಡದೆ ಹೋದರೆ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಈ ವರ್ಷ ಖರ್ಚು ಮಾಡಲು ಸಾಧ್ಯವಾಗದಿದ್ದರೆ ಮುಂದಿನ ವರ್ಷಕ್ಕೆ ಅದು ಸೇರಿಕೊಳ್ಳುತ್ತದೆ. 39,121 ಕೋಟಿ ಕಳೆದ ವರ್ಷ ಮೀಸಲಿಟ್ಟಿದ್ದು, ಈ ಸಾಲಿಗೆ 42018 ಕೋಟಿ  ಮೀಸಲಿಡಲಾಗಿದೆ.  ಕಾಯ್ದೆಯನ್ನು  ಸಂವಿಧಾನದ ಆಶಯಗಳನ್ನು ಈಡೇರಿಸಲೆಂದು ರೂಪಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಇಂದಿನವರೆಗೆ ಎಸ್.ಸಿ. ಪಿ / ಟಿ ಎಸ್ ಪಿ ಕಾಯ್ದೆಯನ್ನು ಜಾರಿ ಮಾಡಿಲ್ಲ. ಕಾಯ್ದೆ ಬಂದ ನಂತರ ಕರ್ನಾಟಕದಲ್ಲಿ ಈ ವರ್ಷ 3,71,273 ಕೋಟಿ ರೂ.ಗಳ ಬಜೆಟ್ ನಲ್ಲಿ  27674 ಎಸ್.ಸಿ. ಪಿ / ಟಿ ಎಸ್ ಪಿ ಗಾಗಿ ಶೇ. 7.46%ಮೀಸಲಿಟ್ಟಿದೆ. ಗುಜರಾತ್ ನಲ್ಲಿ  3,70,000 ಹಣ ಬಜೆಟ್ ನಲ್ಲಿ ಮೀಸಲಿಟ್ಟಿದ್ದು,  ಎಸ್.ಸಿ. ಪಿ / ಟಿ ಎಸ್ ಪಿ ಗಾಗಿ ಶೇ 2.38% ಮೀಸಲಿಟ್ಟಿದ್ದಾರೆ.  ಮಹಾರಾಷ್ಟ್ರದಲ್ಲಿ ಬಜೆಟ್ 612293 ಇದ್ದಾರೆ, 187650 3.6% ಇಟ್ಟಿದೆ. ಕೇಂದ್ರ ಸರ್ಕಾರ 4820512 ಕೋಟಿ ಬಜೆಟ್ ಗಾತ್ರದಲ್ಲಿಎಸ್.ಸಿ. ಪಿ / ಟಿ ಎಸ್ ಪಿ ಗಾಗಿ 138368 ಇದ್ದು 2.87% ಮೀಸಲಿಟ್ಟಿದೆ. ಕರ್ನಾಟಕ ಮಾದರಿಯಲ್ಲೇ ಕೇಂದ್ರ ಸರ್ಕಾರ ಎಸ್.ಸಿ. ಪಿ/ ಟಿ ಎಸ್ ಪಿ ಕಾಯ್ದೆ ಜಾರಿ ಮಾಡಲಿ ಎಂದು ಸರ್ವಾನುಮತದ ನಿರ್ಣಯ ಮಾಡೋಣ ಎಂದು ಕರೆ ನೀಡಿದರು.

2019-23 ಸಾಲಿನಲ್ಲಿ ಈವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಡೀಮ್ಡ್ ವೆಚ್ಚದಲ್ಲಿ ಏಕೆ ವೆಚ್ಚ ಮಾಡಲಿಲ್ಲ?  ದಲಿತ ಸಂಘಟನೆಗಳು ಮೊದಲಿನಿಂದಲೂ ಬೇಡಿಕೆಯಿಟ್ಟಿರುವಂತೆ  ನಮ್ಮ ಅಧಿಕಾರಾವಧಿಯಲ್ಲಿ ಕಾಯ್ದೆಯಲ್ಲಿ 7ಡಿ ತೆಗೆದು ಹಾಕಲಾಯಿತು. ಬಿಜೆಪಿಯವರು ಏಕೆ ತೆಗೆಯಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಡೀ ದೇಶದಲ್ಲಿ ಎಸ್ ಸಿ/ ಎಸ್ ಟಿ ಗಳ ಜನಸಂಖ್ಯೆ 2011ರ ಜನಗಣತಿ ಪ್ರಕಾರ ಶೇ16.6% ಎಸ್.ಸಿ ಹಾಗೂ ಶೇ  8.6% ಎಸ್.ಟಿ ಇದ್ದು, ಎರಡೂ ಸೇರಿ ಒಟ್ಟು ಶೇ27.2 % ಇದ್ದಾರೆ. ಇವರ ಜನಸಂಖ್ಯೆಗನುಗುಣವಾಗಿ ಬಿಜೆಪಿಯವರು ಖರ್ಚು ಮಾಡಲಿಲ್ಲ. ಕೇವಲ ಶೇ2.87% ಖರ್ಚು ಮಾಡಿದ್ದಾರೆ.  ದೇಶದಲ್ಲಿ ಪ.ಜಾ16.6% ಪಂ.ವರ್ಗ 8.6% ಸೇರಿ ಒಟ್ಟು 25.2%  ಇದ್ದು ಕೇವಲ 2.87% ವೆಚ್ಚ ಮಾಡಿದ್ದಾರೆ.  7ಡಿ ಬಗ್ಗೆ ಬಹಳ ದಿನಗಳಿಂದ ಒತ್ತಾಯವಿತ್ತು. ಆದ್ದರಿಂದ ಕಳೆದ ವರ್ಷ ತಿದ್ದುಪಡಿ ತಂದು ತೆಗೆದುಹಾಕಿದೆವು 7ಸಿ  ತೆಗೆದುಹಾಕಿಲ್ಲ ಎಂದರು.

Key words: central government, implement, SCP, TSP Act, Karnataka model, CM Siddaramaiah

The post ಕೇಂದ್ರ ಸರ್ಕಾರ ಕರ್ನಾಟಕ ಮಾದರಿಯಲ್ಲೇ SCP, TSP ಕಾಯ್ದೆ ಜಾರಿ ಮಾಡಲಿ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ತಮ್ಮ ತಮ್ಮ ಕ್ಷೇತ್ರವನ್ನೇ ನೋಡುತ್ತಾ ಹೋದ್ರೆ ರಾಜ್ಯದ ಸಮಗ್ರ ಅಭಿವೃದ್ದಿ ಹೇಗೆ? ಸಚಿವರ ವಿರುದ್ದ ‘ಕೈ’ ಶಾಸಕ ಅಸಮಾಧಾನ

ಬೆಂಗಳೂರು,ಮಾರ್ಚ್,19,2025 (www.justkannada.in):  ಕೃಷಿ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನ ಸಚಿವರು...

കര്‍ഷക നേതാക്കള്‍ കസ്റ്റഡിയില്‍; ഖനൗരിയിലും ശംഭുവിലും ഇന്റര്‍നെറ്റ് വിലക്ക്

ചണ്ഡീഗഡ്: പഞ്ചാബില്‍ കര്‍ഷക നേതാക്കള്‍ പൊലീസ് കസ്റ്റഡിയില്‍. മിനിമം താങ്ങുവില ഉള്‍പ്പെടെ...

இந்தியா, ரஷ்யா, சீனாவுக்கு ட்ரம்ப் போடும் கூட்டல், கழித்தல் கணக்கு; கைகொடுக்குமா?! | Explainer

"நான், டொனால்ட் ஜான் ட்ரம்ப், அமெரிக்க ஜனாதிபதி பதவியில் உண்மையாக பணியாற்றுவேன்...

Jasprit Bumrah: గాయం నుండి పూర్తిగా కోలుకోని బుమ్రా.. ఐపీఎల్ 2025కు అందుబాటులో ఉంటాడా?

Jasprit Bumrah: భారతీయ క్రికెట్‌లో అత్యుత్తమ బౌలర్లలో ఒకరైన జస్ప్రీత్ బుమ్రా...