16
Sunday
March, 2025

A News 365Times Venture

ಮೈಸೂರು ನಗರಕ್ಕೆ ಕಬಿನಿ ನದಿ ಮೂಲದಿಂದ ಕುಡಿಯುವ ನೀರನ್ನು ವೃದ್ಧಿಸುವ ಯೋಜನೆ.

Date:

ಮೈಸೂರು ಫೆ.16, ೨೦೨೫ : ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್.ಸಿ.ಮಹದೇವಪ್ಪ ಅವರು ಇಂದು ನಂಜನಗೂಡು ಬಳಿಯಬಿದರಗೋಡಿನಲ್ಲಿರುವ ಕಬಿನಿ ನೀರು ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ  ಜಲಶುದ್ದೀಕರಣ ಘಟಕಗಳ ನಿರ್ಮಿಸುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೆಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶೈಕ್ ತನ್ವಿರ್ ಆಸಿಫ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಕಬಿನಿ ಕುಡಿಯುವ ನೀರಿನ ಯೋಜನೆ :

ಮೈಸೂರು ನಗರಕ್ಕೆ ಕಬಿನಿ ನದಿ ಮೂಲದಿಂದ ಕುಡಿಯುವ ನೀರನ್ನು ವೃದ್ಧಿಸುವ ಯೋಜನೆಯನ್ನು 2008 ನೇ ಸಾಲಿನಲ್ಲಿ ಜಲ ಮಂಡಳಿ ವತಿಯಿಂದ ಯೋಜನೆಯನ್ನು ರೂಪಿಸಿ ವಿಷ್ಕೃತ ಯೋಜನಾ ವರದಿಯನ್ನು ತಯಾರಿಸಿಲಾಗಿರುತ್ತದೆ. ಸದರಿ ವಿಷ್ಣತ ಯೋಜನಾ ವರದಿಯಂತೆ ಕಬಿನಿ ನೀರು ಸರಬರಾಜು ಯೋಜನೆಯನ್ನು 3 ಹಂತದಲ್ಲಿ ಒಟ್ಟು 184 ಎಂ.ಎಲ್.ಡಿ ಸಾರ್ಮಥ್ಯಕ್ಕೆ ಅಭಿವೃದ್ಧಿಪಡಿಸುವುದಾಗಿ ಪರಿಗಣಿಸಿ, ವಿನ್ಯಾಸಿಸಲಾಗಿರುತ್ತದೆ.

ಅದರಂತೆ ಮೈಸೂರು ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಸದರಿ ಯೋಜನೆಯ ಸಾಮರ್ಥ್ಯವನ್ನು ಉನ್ನತ್ತೀಕರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ.

ಸದರಿ ಉನ್ನತ್ತೀಕರಣದ ಯೋಜನೆಯಡಿಯಲ್ಲಿ ಕೆಂಬಾಳ್ ಜಲಶುದ್ದೀಕರಣ ಘಟಕದಲ್ಲಿ ಹೊಸದಾಗಿ 60 ಎಂ.ಎಲ್.ಡಿ ಸಾಮರ್ಥ್ಯದ ಫ್ಲಾಕ್ಯೂಲೇಟರ್ ಮತ್ತು ಟ್ಯೂಬ್ ಸೆಟ್ಟರ್ ಘಟಕವನ್ನು ಮತ್ತು ರ್ಯಾಪಿಡ್ ಸ್ಯಾಂಡ್ ಫಿಲ್ಟ್ರೇಷನ್ ಘಟಕಗಳನ್ನು ನಿರ್ಮಿಸುವ, ದೂರ ಸಬ್‌ಸ್ಟೇಷನ್‌ನಿಂದ ಕೆಂಬಾಳ್ ಯಂತ್ರಾರದವರೆಗೆ 11 ಕೆ.ವಿ ಎಕ್ಸ್‌ಪ್ರೆಸ್ ಭೂಗತ ಕೇಬಲ್ ಅಳವಡಿಸುವ, ಕೆಂಬಾಳ್ ಯಂತ್ರಾಗಾರದಲ್ಲಿ ಮತ್ತು ಪಿಂಜರಾಪೋಲ್ ಐ.ಬಿ.ಪಿ.ಎಸ್ ನಲ್ಲಿ ಹೊಸದಾಗಿ 2500 ಹೆದ್.ಪಿ. ಮತ್ತು 1750 ಹೆದ್.ಪಿ. ಸಾಮರ್ಥ್ಯದ ಪಂಪಿಂಗ್ ಯಂತ್ರೋಪಕರಣಗಳು ಅಳವಡಿಸುವ ಮತ್ತು ಇದಕ್ಕೆ ಸಂಬಂಧಿಸಿದ ವಿದ್ಯುತ್ ಉಪಕರಣಗಳನ್ನು ಅಳವಡಿಸಲಾಗುತ್ತಿದೆ.

ಜಲಶುದ್ದೀಕರಣ ಘಟಕಗಳನ್ನು ನಿರ್ಮಿಸುವ ಕಾಮಗಾರಿಗಳನ್ನು ಮಾರ್ಚ್-2021 ರಲ್ಲಿ ಪ್ರಾರಂಭಿಸಲಾಗಿರುತ್ತದೆ ಮತ್ತು ಪಂಪಿಂಗ್ ಮತ್ತು ವಿದ್ಯುತ್ ಉಪಕರಣಗಳನ್ನು ಅಳವಡಿಸುವ ಕಾಮಗಾರಿಯನ್ನು ಏಪ್ರಿಲ್-2023 ರಲ್ಲಿ ಪ್ರಾರಂಭಿಸಲಾಗಿದ್ದು, ಹಾಲಿ ಶೇಕಡ 90% ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಯಂತ್ರಾಗಾರದ ಒಳಗಡೆ ವಿದ್ಯುತ್ ಉಪಕರಣಗಳನ್ನು ಅಳವಡಿಸುವ ಕಾಮಗಾರಿಗಳು ಬಾಕಿ ಉಳಿದುಕೊಂಡಿರುತ್ತದೆ.

ಈ ಕಾಮಗಾರಿಯು ಪೂರ್ಣಗೊಂಡ ನಂತರ ಶುದ್ದೀಕರಣ ಘಟಕಗಳ ಸಾಮರ್ಥ್ಯ 120 ಎಂ.ಎಲ್.ಡಿ ಗೆ ಮತ್ತು ಪಂಪಿಂಗ್ ಸಾಮರ್ಥ್ಯವು 100 ಎಂ.ಎಲ್.ಡಿ ಗೆ ಹೆಚ್ಚಳವಾಗುತ್ತದೆ ಮತ್ತು ಇದರಿಂದ ಮೈಸೂರು ನಗರಕ್ಕೆ ಸಾರ್ವಜನಿಕ ಬಳಕೆಗೆ ಹೆಚ್ಚುವರಿಯಾಗಿ 40 ಎಂ.ಎಲ್.ಡಿ ನೀರು ಲಭ್ಯವಾಗುತ್ತದೆ.

ಈ ಹೆಚ್ಚುವರಿ ನೀರನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಈ ಕೆಳಕಂಡ ಬಡಾವಣೆಗಳಿಗೆ 13 ಎಂ.ಎಲ್.ಡಿ ಮತ್ತು ಉಳಿಕೆ ನೀರನ್ನು ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ ಗಳಿಗೆ ಸರಬರಾಜು ಮಾಡಲಾಗುತ್ತದೆ.

key words: drinking water, kabini river, Mysuru city.

Project to augment drinking water from kabini river source to Mysuru city.

The post ಮೈಸೂರು ನಗರಕ್ಕೆ ಕಬಿನಿ ನದಿ ಮೂಲದಿಂದ ಕುಡಿಯುವ ನೀರನ್ನು ವೃದ್ಧಿಸುವ ಯೋಜನೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ತನಿಖೆ: ನಮಗೆ ಯಾವುದೇ ಮಾಹಿತಿ ಇಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,15,2025 (www.justkannada.in): ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ತನಿಖೆ...

ചരിത്ര നേട്ടത്തോടെ എ.പി.എന്‍.ഡി 2025 കോണ്‍ഫറന്‍സിന് സമാപനം: അപൂര്‍വ രോഗങ്ങളള്‍ക്ക് ചികിത്സ അപൂര്‍വമാകില്ലെന്ന് മന്ത്രിയുടെ ഉറപ്പ്

തിരുവനന്തപുരം: ഇന്ത്യന്‍ അക്കാദമി ഓഫ് ന്യൂറോളജിയുടെ ഉപവിഭാഗമായ പീഡിയാട്രിക് ന്യൂറോളജി, ന്യൂറോമസ്‌കുലാര്‍...

'காஸாவிற்கு ஆதரவாக போராட்டம்… விசா ரத்து' – நாடு திரும்பிய இந்திய மாணவி; ட்ரம்ப் அரசின் கெடுபிடி!

"இனி அமெரிக்காவில் உள்ள கல்வி நிறுவனங்களில் படிக்கும் மாணவர்கள் யாரும் ...

Uttam Kumar Reddy : కాంగ్రెస్ పార్టీ ప్రభుత్వం సాధించిన విజయం ఇది

Uttam Kumar Reddy : కృష్ణా జలాలతో ఆంద్రప్రదేశ్ ప్రభుత్వం నిర్మించ...