14
Friday
March, 2025

A News 365Times Venture

5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ ಡಿಸಿಎಂ

Date:

 

ಬೆಂಗಳೂರು, Feb.11,2025: ರಾಜ್ಯ ಸರಕಾರವು ಮುಂದಿನ ಐದು ವರ್ಷಗಳ (2025-30) ಉದ್ಯಮ ಬೆಳವಣಿಗೆಗೆ ರೂಪಿಸಿರುವ ನೂತನ ಕೈಗಾರಿಕಾ ನೀತಿಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಿಡುಗಡೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಂಗಳವಾರ ಅನಾವರಣಗೊಳಿಸಿದರು.

ಹೊಸ ನೀತಿಯು ಇನ್ನು ಐದು ವರ್ಷಗಳಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಕರ್ಷಿಸುವ, 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು ಸನ್-ರೈಸ್ ವಲಯದಲ್ಲಿ ರಾಜ್ಯವನ್ನು ಇಡೀ ದೇಶಕ್ಕೆ ನಂಬರ್ ಒನ್ ಆಗಿ ಪ್ರತಿಷ್ಠಾಪಿಸುವ ಹೆಗ್ಗುರಿಗಳನ್ನು ಹೊಂದಿದೆ. ಇದನ್ನೆಲ್ಲ ಸಾಧಿಸಲು ಬೆಂಗಳೂರಿನ ಆಚೆಗೆ ಹಾಗೂ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆ/ತಾಲ್ಲೂಕುಗಳಿಗೆ ಆದ್ಯತೆ ಕೊಡಲಾಗಿದೆ. ಇದಕ್ಕಾಗಿ ಕೈಗಾರಿಕಾ ಬೆಳವಣಿಗೆ ಆಧರಿಸಿ ಪ್ರದೇಶವಾರು ಪ್ರೋತ್ಸಾಹಕ ಭತ್ಯೆಗಳನ್ನು ನೀಡಲಾಗುವುದು ಎಂದು ಹೊಸ‌ ನೀತಿಯಲ್ಲಿ ತಿಳಿಸಲಾಗಿದೆ.

ಹೊಸ‌‌ ನೀತಿಯಲ್ಲಿ ಅಂಶಗಳನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ವಿವರಿಸಿದ್ದಾರೆ.

ಈ ನೀತಿಯಲ್ಲಿ ಡಿ ಎಂ ನಂಜುಂಡಪ್ಪ ವರದಿ ಆಧರಿಸಿ ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ/ತಾಲ್ಲೂಕುಗಳನ್ನು ಝೋನ್-1 ಮತ್ತು 2ರಡಿ ತರಲಾಗಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು `ಝೋನ್-3’ ಎಂದು ಗುರುತಿಸಲಾಗಿದೆ. ಉದ್ಯಮಗಳ ಸಾಮರ್ಥ್ಯ ಮತ್ತು ಬೆಳವಣಿಗೆ ನಿಚ್ಚಳತೆಗೆ ಅನುಗುಣವಾಗಿ ವಲಯಗಳನ್ನಾಗಿ ಮಾಡಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಸೃಷ್ಟಿಗೆ ಆದ್ಯತೆ ಇರುವಂತೆ ಎಚ್ಚರ ವಹಿಸಲಾಗಿದೆ ಎಂದು ಪಾಟೀಲ ಅವರು ನುಡಿದಿದ್ದಾರೆ.

ಹೈಟೆಕ್ ತಯಾರಿಕೆ ವಲಯದಲ್ಲಿ ರಾಜ್ಯವನ್ನು ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಏರುವಂತೆ ಮಾಡಲಾಗುವುದು. ಜೊತೆಗೆ ಸುಸ್ಥಿರ, ಪರಿಸರಸ್ನೇಹಿ, ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಳ್ಳಲಿರುವ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲಾಗುವುದು. ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದ ಮೂಲಕ ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತಹ ವ್ಯವಸ್ಥೆ ಮುಂದೆ ಬರಲಿದೆ. ಭಾರೀ ಹೂಡಿಕೆ ಇರುವ ಕೈಗಾರಿಕಾ ಯೋಜನಗೆಳ ವ್ಯಾಪ್ತಿಯಲ್ಲಿ ಡಾರ್ಮಿಟರಿ ಮತ್ತು ವಸತಿ ವ್ಯವಸ್ಥೆಗೆ ಸರಕಾರ ಕೈಜೋಡಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಸಂಶೋಧನೆ ಮತ್ತು ಎಂಎಸ್ಎಂಇಗೆ ಗಮನ:

ನೂತನ ಕೈಗಾರಿಕಾ ನೀತಿಯಲ್ಲಿ ಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆಯ ಅಭಿವೃದ್ಧಿಗೆ ಕ್ವಿನ್ ಸಿಟಿಯನ್ನು ಅಭಿವೃದ್ಧಿ ಪಡಿಸಲಾಗುವುದು. ಕೆಐಎಡಿಬಿ ಮೂಲಕ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇಕಡ 30ರಷ್ಟು ಜಾಗವನ್ನು ಮೀಸಲಿಟ್ಟು, ತಂತ್ರಜ್ಞಾನದ ಉನ್ನತೀಕರಣ, ಕೌಶಲ್ಯಾಭಿವೃದ್ಧಿ, ಉತ್ಕೃಷ್ಟತಾ ಪುರಸ್ಕಾರ, ಕ್ಲಸ್ಟರ್ಸ್ ಅಭಿವೃದ್ಧಿ, ಆಕರ್ಷಕ ಪ್ರೋತ್ಸಾಹನಾ ಭತ್ಯೆ ಮತ್ತು ರಿಯಾಯಿತಿಗಳಿಗೆ ಗಮನ  ಹರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.

ಕೆಲವು ಪ್ರದೇಶಗಳನ್ನು `ವಿಶೇಷ ಹೂಡಿಕೆ ಪ್ರದೇಶ’ (ಸ್ಪೆಷಲ್ ಇನ್ವೆಸ್ಟ್ಮೆಂಟ್ ರೀಜನ್) ಆಗಿ ಘೋಷಿಸಿ, ಉದ್ಯಮಗಳ ಆರ್ & ಡಿ ವಿಭಾಗ ಮತ್ತು ಉತ್ಪಾದನಾ ಘಟಕಗಳು ಒಂದೇ ಕಡೆ ಇರುವುದನ್ನು ಉತ್ತೇಜಿಸಲಾಗುವುದು. ಹೂಡಿಕೆದಾರರು ತಮ್ಮ ಕೇಪೆಕ್ಸ್ ಸಬ್ಸಿಡಿ ಅಥವಾ ಉತ್ಪಾದನೆ ಆಧರಿತ ಪ್ರೋತ್ಸಾಹನಾ ಭತ್ಯೆ ನಡುವೆ ತಮಗೆ ಯಾವುದು ಅನುಕೂಲವೋ ಅದನ್ನು ಆರಿಸಿಕೊಳ್ಳಲು ಅವಕಾಶ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಖಾಸಗಿ ಕೈಗಾರಿಕಾ ಪ್ರದೇಶಗಳಿಗೂ ಅವಕಾಶ :

ನೂತನ ಕೈಗಾರಿಕಾ ನೀತಿಯಡಿಯಲ್ಲಿ ಖಾಸಗಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೂ ಅವಕಾಶ ಇರಲಿದೆ. ಇದರಂತೆ ಸಮಗ್ರ ಕೈಗಾರಿಕಾ ಪಾರ್ಕ್, ವಲಯವಾರು ಪಾರ್ಕ್, ಲಾಜಿಸ್ಟಿಕ್ಸ್ ಪಾರ್ಕ್ ಇತ್ಯಾದಿಗಳ ಅಭಿವೃದ್ಧಿ ಮಾಡಲಾಗುವುದು. ಜತೆಗೆ ಕೈಗಾರಿಕಾ ಪ್ರದೇಶಗಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಈಗಿರುವ ನಿರ್ಬಂಧಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶ ಎರಡರಲ್ಲೂ ತೆಗೆದು ಹಾಕಲಾಗುವುದು. ಜತೆಗೆ ನೇರ ಉದ್ಯೋಗ ಸೃಷ್ಟಿಗೆ ನೀತಿಯು ಒತ್ತು ಕೊಟ್ಟಿದೆ.

ಹಿಂದುಳಿದ ಜಿಲ್ಲೆ/ತಾಲ್ಲೂಕಿಗೆ ರಿಯಾಯಿತಿ/ಭತ್ಯೆ:

ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ/ತಾಲ್ಲೂಕುಗಳಲ್ಲಿ ಹೂಡಿಕೆ ಮಾಡಿ, ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ನೂತನ ಕೈಗಾರಿಕಾ ನೀತಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ಅವು ಹೀಗಿವೆ:

* ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇ 10ರಿಂದ 30ರಷ್ಟು ಕ್ಯಾಪಿಟಲ್ ಸಬ್ಸಿಡಿ

* ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿನಾಯಿತಿ

* ಭೂ ಪರಿವರ್ತನೆ ಶುಲ್ಕ ವಾಪಸ್

* ಎಂಎಸ್ಎಂಇಗಳಿಗೆ ವಿದ್ಯುತ್ ಬಿಲ್ ಮೇಲಿನ ತೆರಿಗೆಯಿಂದ ವಿನಾಯಿತಿ

* ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ವಿದ್ಯುತ್ ಸಬ್ಸಿಡಿ

* ಮಳೆ ನೀರು ಸಂಸ್ಕರಣೆ ಮತ್ತು ತ್ಯಾಜ್ಯ ನೀರು ಮರುಪೂರಣಕ್ಕೆ ಪ್ರೋತ್ಸಾಹನ ಭತ್ಯೆ

* ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆಗೆ ಪ್ರೋತ್ಸಾಹನ ಭತ್ಯೆ

ಮೆಗಾ ಯೋಜನೆಗಳಿಗೆ ಸಿಗುವ ಸೌಲಭ್ಯ :

* ಪಿಎಲ್ಐ ಅಥವಾ ವಿಎಫ್ಎನ ಶೇ 10ರಿಂದ 25ರಷ್ಟು ಬಂಡವಾಳ ವೆಚ್ಚ ಸಬ್ಸಿಡಿ

* ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಹಿಂದುಳಿದ ಮತ್ತು ಅತೀ ಹಿಂದುಳಿದ ತಾಲ್ಲೂಕುಗಳಲ್ಲಿನ ಹೂಡಿಕೆಗೆ ಕ್ರಮವಾಗಿ ಶೇಕಡ 3 ಮತ್ತು ಶೇಕಡ 5ರಷ್ಟು ಹೆಚ್ಚುವರಿ ಸಬ್ಸಿಡಿ

* ಖಾಸಗಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಪ್ರೋತ್ಸಾಹನ ಭತ್ಯೆ ಮತ್ತು ರಿಯಾಯಿತಿ

* ಉದ್ಯೋಗಸೃಷ್ಟಿ ಮತ್ತು ಮಹಿಳಾ ಉದ್ಯೋಗಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಸಬ್ಸಿಡಿ

* ಆರ್ & ಡಿ ಜತೆಗೆ ಉತ್ಪಾದನಾ ಘಟಕ ಸ್ಥಾಪನೆಗೆ ಉತ್ತೇಜನ

* ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ವಿನಾಯಿತಿ

* ಭೂ ಪರಿವರ್ತನೆ ಶುಲ್ಕ ವಾಪಸ್

 

key words: 20 lakh jobs, in 5 years, Dy CM D.K.Shivakumar , releases, new industrial policy

SUMMARY:

20 lakh jobs in 5 years: Dy CM D.K.Shivakumar releases new industrial policy

The new policy aims to attract investment of Rs 7.50 lakh crore to the state in the next five years, create 20 lakh jobs and establish the state as number one for the entire country in the sunrise sector. To achieve all this, priority has been given to backward and most backward districts/taluks beyond Bengaluru. For this, area-wise incentive allowances will be given based on industrial growth, the new policy said.

The post 5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ ಡಿಸಿಎಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘എന്നെ വളര്‍ത്തിയെടുക്കുന്നതില്‍ നിങ്ങള്‍ക്കെന്ത് പങ്ക്’; ഇടതുപക്ഷത്തിന് വേണ്ടി പാടരുതെന്ന് പറയുന്നവരോട് ഗായിക പുഷ്പാവതി

കോഴിക്കോട്: ഇടതുപക്ഷത്തിന് വേണ്ടി പാടരുതെന്ന് പറയുന്നവര്‍ക്ക് മറുപടിയുമായി ഗായിക പുഷ്പാവതി. തന്നോട്...

`₹'-க்கு பதில் `ரூ' : “பிராந்திய பேரினவாதம்'' – திமுகவை தாக்கிய நிர்மலா சீதாராமன்!

தேசிய கல்விக் கொள்கையை அமல்படுத்துவதில் எழுந்த சர்ச்சையைத் தொடர்ந்து, தமிழகத்தில் இந்தி...

IPL 2025: ఇంగ్లండ్ స్టార్ బ్యాటర్‌ హ్యారీ బ్రూక్‌పై రెండేళ్ల నిషేధం!

ఇంగ్లండ్ స్టార్ బ్యాటర్‌ హ్యారీ బ్రూక్‌కు భారత క్రికెట్ నియంత్రణ మండలి...

ಆರ್. ಎಸ್.‌ ಎಸ್.‌ ಕಾರ್ಯಕರ್ತ ರಾಜು ಹತ್ಯೆಗೆ ೯ ವರ್ಷ: ಮಸೀದಿ ಬೀಗ ತೆಗೆಯುವ ಬಗ್ಗೆ ಡಿಸಿ ನೇತೃತ್ವದಲ್ಲಿ  ನಾಳೆ ಸಭೆ.

  ಮೈಸೂರು, ಮಾ.೧೩,೨೦೨೫:  ನಗರದ ಕ್ಯಾತಮಾತರಮಹಳ್ಳಿ ನಿವಾಸಿ, ಆರ್.ಎಸ್.ಎಸ್.‌ ಕಾರ್ಯಕರ್ತ ರಾಜು...