17
Monday
March, 2025

A News 365Times Venture

ಮುಸ್ಲೀಂ ವೇಷದಲ್ಲಿ RSS ಕಾರ್ಯಕರ್ತರಿಂದ ಗಲಭೆ : ಎಂ.ಲಕ್ಷ್ಮಣ್

Date:

ಮೈಸೂರು,ಫೆಬ್ರವರಿ,11,2024 (www.justkannada.in):  ನಿನ್ನೆ ಉದಯಗಿರಿಯಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಮುಸ್ಲೀಂ ವೇಷದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಗಲಭೆ ನಡೆಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್,  ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಬಿಜೆಪಿ ಮತ್ತು ಆರ್.ಎಸ್.ಎಸ್   ಕಾರ್ಯಕರ್ತರನಾಗಿರುವ ಸತೀಶ್ ಅಲಿಯಾಸ್ ಪಾಂಡುರಂಗ ಎಂಬುವನು ರಾಹುಲ್‌ ಗಾಂಧಿ, ಅಖಿಲೇಶ್ ಯಾದವ್, ಅರವಿಂದ ರೀಜ್ರವಾಲ್ ರವರ ಚಿತ್ರಗಳನ್ನು ಆಶ್ಲೀಲವಾಗಿ ಬಿಂಬಿಸಿ ಆಕ್ಷೇಪರ್ಹ ಬರವಣಿಗೆಗಳನ್ನು ಬರೆದು ಪೋಸ್ಟ್ ಮಾಡಿರುವುದಲ್ಲದೆ ಮುಸ್ಲಿಂ ಸಮುದಾಯದ ಧರ್ಮ ಗುರುಗಳ ಬಗ್ಗೆಯೂ ಆಶ್ಲೀಲ ಮತ್ತು ಆಕ್ಷೇಪವಾದ ಚಿತ್ರಗಳನ್ನು ಹಾಕಿದ್ದಾನೆ. ಇದರ ರಾಜಕೀಯ ಲಾಭ ಪಡೆಯಲು ಬಿಜೆಪಿ ಆರ್ ಎಸ್ ಎಸ್ ನ ಹುನ್ನಾರ ಇದು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರು ಸಲ್ಲಿಸಿದ ನಂತರ ಮಾತನಾಡಿದ ಎಂ.ಲಕ್ಷ್ಮಣ್,  ಆರ್ ಎಸ್ ಎಸ್ ನವರು  ಒಂದುವರೆ ವರ್ಷದಿಂದ ನಿರಂತರ ತೊಂದರೆ ನೀಡುತ್ತಿದ್ದಾರೆ. ಸಣ್ಣ ಸಣ್ಣ ವಿಷಯಗಳನ್ನು ಬೀದಿಗೆ ತಂದು ದೊಡ್ಡದು ಮಾಡುತ್ತೀದ್ದಾರೆ. ಸಿಎಂ ತವರಲ್ಲಿ ಗಲಭೆ ಹಬ್ಬಿಸಬೇಕೆಂದು ಬಿಜೆಪಿ, ಆರ್ ಎಸ್ ಎಸ್ ನಿಂದ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ 300 ಮಂದಿ ಆರ್ ಎಸ್ ಎಸ್ ಕಾರ್ಯಕರ್ತರು ವೇಷಧಾರಿಗಳಾಗಿ ಮೈಸೂರಿಗೆ ಆಗಮಿಸಿದ್ದಾರೆ. ನಿನ್ನೆ ನಡೆದ ಗಲಾಟೆಯಲ್ಲಿ 50 ಮಂದಿ ಆರ್ ಎಸ್ ಎಸ್ ನವರಿದ್ದರು ಎನ್ನುವ ಮಾಹಿತಿ ಇದೆ. ಗಲಾಟೆ ತೀವ್ರಗೊಳಿಸಲು ಮಾಜಿ ಸಂಸದ ಪ್ರತಾಪ್ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಪ್ರಚೋದನೆ ನಡೆಸುತ್ತಿರುವ ಪ್ರತಾಪ್ ಸಿಂಹ ಅರೆಸ್ಟ್ ಆಗಬೇಕು. ನಮ್ಮ ನಾಯಕರ ಭಾವಚಿತ್ರಕ್ಕೆ ಅಪಮಾನ ಮಾಡಿ ಸಿಎಂ ಮೇಲೆ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ. ಬಂಧಿತ ಆರ್ ಎಸ್ ಎಸ್ ಮೂಲದವನು ಹಾಗೂ ಪ್ರತಾಪ್ ಸಿಂಹ ಭಂಟ ಈ ಪ್ರಕರಣದ ರೂವಾರಿ ಪ್ರತಾಪ್ ಸಿಂಹ ಮೈಸೂರು ಬಿಟ್ಟು ಎಸ್ಕೇಪ್ ಆಗುವ ಮುಂಚೆ ಅರೆಸ್ಟ್ ಆಗಬೇಕು ಎಂದು ಆಗ್ರಹಿಸಿದ್ದಾರೆ.

Key words: Udayagiri Riots, RSS workers, Muslims, M. Laxman

The post ಮುಸ್ಲೀಂ ವೇಷದಲ್ಲಿ RSS ಕಾರ್ಯಕರ್ತರಿಂದ ಗಲಭೆ : ಎಂ.ಲಕ್ಷ್ಮಣ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

CM Chandrababu : ఈ నెల 18న ఢిల్లీకి సీఎం చంద్రబాబు

CM Chandrababu : ఏపీ ముఖ్యమంత్రి చంద్రబాబు నాయుడు (AP CM...

ಗೋಲ್ಡ್ ಸ್ಮಗ್ಲಿಂಗ್ ಕೇಸ್:ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ ನಟಿ ರನ್ಯಾರಾವ್

ಬೆಂಗಳೂರು,ಮಾರ್ಚ್,15,2025 (www.justkannada.in):   ಚಿನ್ನಕಳ್ಳ ಸಾಗಾಣೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ...

കേരളത്തില്‍ ഒറ്റപ്പെട്ടയിടങ്ങളില്‍ ഇടിമിന്നലോടുകൂടിയ മഴയ്ക്ക് സാധ്യത

തിരുവനന്തപുരം: സംസ്ഥാനത്ത് ഒറ്റപ്പെട്ടയിടങ്ങളില്‍ ഇന്നും നാളെയും 16.03.25, 17.03.25 തിയതികളില്‍ ഇടിമിന്നലോടു...

`புத்தாண்டு, ஹோலி…' அடிக்கடி வியட்நாம் செல்லும் ராகுல் காந்தி; காரணம் கேட்கும் பாஜக

மத்திய எதிர்க்கட்சித் தலைவர் ராகுல் காந்தி தற்போது தனிப்பட்ட பயணமாக வியட்நாம்...