ಬೆಂಗಳೂರು,ಫೆಬ್ರವರಿ,8,2025 (www.justkannada.in): ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು ಅಧಿಕಾರದ ಗದ್ದುಗೆಗೇರುವುದು ಖಚಿತವಾಗಿದೆ. ಈ ಬಿಜೆಪಿ ಗೆಲುವಿಗೆ ವಿಪಕ್ಷ ನಾಯಕ ಆರ್.ಅಶೋಕ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆರ್.ಅಶೋಕ್, ದೆಹಲಿಯ ಜನತೆ ಭ್ರಷ್ಟಾಚಾರಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ದೇಶದ ಜನರ ಪ್ರೀತಿ ಪ್ರಧಾನಿ ಮೋದಿ ಮೇಲೆ ಇದೆ. ದೇಹಲಿ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಅಭಿನಂದನೆ ಎಂದು ಶುಭಕೋರಿದರು.
ಮೋದಿ ನಾಯಕತ್ವ ಜನಪರ ನಂಬಿಕೆಗಳಿಗೆ ಮನ್ನಣೆ ಸಿಕ್ಕಿದೆ. ಭ್ರಷ್ಟಾಚಾರಕ್ಕೆ ಜನರು ಉತ್ತರ ಕೊಟ್ಟಿದ್ದಾರೆ ಕೇಜ್ರಿವಾಲ್ ಅಧಿಕಾರಕ್ಕೆ ಅಂಟಿ ಕೊಂಡಿದ್ದರು. ಕಾರು, ಮಫ್ಲರ್, ನಿಮಿಷಕ್ಕೊಮ್ಮೆ ಕೆಮ್ಮೋದು, ಎರಡು ಬೆಡ್ ರೂ ಫ್ಲ್ಯಾಟ್, ಈಗ ಶಿಷ್ ಮಹಲ್ ಅದಲ್ಲಿ 25 ರೂಮುಗಳ ಮನೆ, ಕಾರು ಎಸ್ಕಾರ್ಟ್ ಹೀಗೆ ರಾಜನ ರೀತಿ ಆಡಳಿತ ನಡೆಸುತ್ತಿರುವ ಕೇಜ್ರಿವಾಲ್ ಅವರನ್ನು ನೋಡಿ ಜನ ಬೇಸತ್ತಿದ್ದರು. ಕೇಜ್ರಿವಾಲ್ ಕ್ರೇಜ್ ಕಳೆದುಕೊಂಡಿದ್ದಾರೆ. ಹಾಗಾಗಿ ಇಂದು ದೆಹಲಿಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವಾಗಿದೆ ಎಂದರು.
Key words: Delhi election, BJP,Win, R. Ashok
The post ಪ್ರಧಾನಿ ಮೋದಿ ನಾಯಕತ್ವಕ್ಕೆ ಮನ್ನಣೆ: ಭ್ರಷ್ಟಾಚಾರಕ್ಕೆ ತಕ್ಕ ಉತ್ತರ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.