ಮೈಸೂರು,ಫೆಬ್ರವರಿ,7,2025 (www.justkannada.in): ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತೇನೆ ಎಂದು ಮೈಸೂರು ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುಧಾಕರ್ ಎಸ್ ಶೆಟ್ಟಿ, ಮೈಸೂರು ಜೆಲ್ಲೆಯ ಮೂಡಾದಲ್ಲಿದ್ದ ಎಲ್ಲಾ ಖಾಸಗಿ ಲೇಔಟ್ ಗಳ ನಿವೇಶನಗಳನ್ನು ಈ ಇ-ಖಾತಾ ಮಾಡಲು ಆಯಾ ಬೇರೆ ಬೇರೆ ಪಂಚಾಯಿತಿಗಳಿಗೆ ಮೂಡವು ಈಗಾಗಲೇ ದಾಖಲೆಗಳನ್ನು ಕಳಿಸಿಕೊಟ್ಟಿದೆ. ಆದರೆ ಸ್ಥಳೀಯ ಪಂಚಾಯಿತಿಗಳಲ್ಲಿ ಪಿಡಿಒ ಅವರು ಕೂಡಲೇ ಅದನ್ನು ಕೇವಲ 24 ಗಂಟೆಗಳಲ್ಲಿ ಇ-ಖಾತೆ ಮಾಡಿಕೊಡುತ್ತಾರೆ ಎನ್ನುವ ಪತ್ರಿಕಾ ಪ್ರಕಟಣೆಯನ್ನು ರಾಜ್ಯದ ಕಂದಾಯ ಸಚಿವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಸ್ಥಳೀಯ ಪಂಚಾಯಿತಿಗಳ ಸದಸ್ಯರು ಈ ಖಾತೆಯನ್ನೇ ಒಂದು ಅವರ ಸ್ವಂತ ಆದಾಯದ ಮೂಲವನ್ನಾಗಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಈ ಖಾತೆಯಿಂದ ಮೂಡಾಕ್ಕೆ ಹೋಗುತ್ತಿದ್ದ ಟ್ಯಾಕ್ಸ್ ಗಳು ಇನ್ನು ಮುಂದೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿಗೆ ಫಲವರ್ಧನೆ ನೀಡಲಿದೆ. ದುರಾದೃಷ್ಟ ಪಂಚಾಯತ್ ಸದಸ್ಯರು ಅದನ್ನೇ ಅವರ ಆದಾಯದ ಮೂಲ ಎಂದು ತಿಳಿದಿದ್ದಾರೆ. ಪಂಚಾಯತಿ ಸದಸ್ಯರು ನನಗೆ ತಿಳಿದಿರುವಂತೆ ಹಲವಾರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ನಿವೇಶನಗಳನ್ನು ಸದಸ್ಯರು ಪ್ರತಿ ಸದಸ್ಯರು ಅವರವರಿಗೆ ಇಷ್ಟಿಷ್ಟು ಸೈಟು ಇ-ಖಾತೆ ಎನ್ನುವ ಮುಖಾಂತರ ಹಂಚಿಕೊಂಡಿದ್ದಾರೆ ಎನ್ನುವ ಬಲ್ಲಮೂಲಗಳಿಂದ ತಿಳಿದಿದ್ದೇನೆ
ಇದರಿಂದ ಈ ಖಾತೆಯನ್ನು ನಂಬಿ ಈ ಖಾತೆಯ ಮುಖಾಂತರ ಬ್ಯಾಂಕ್ ಲೋನ್ ಗಳನ್ನಾಗಿ ಅಥವಾ ಕಟ್ಟಡ ಕಟ್ಟುವುದಕ್ಕಾಗಲಿ ಹೋಗಲಿಕ್ಕೆ ಲಕ್ಷಾಂತರ ನಿವೇಶನದವರಿಗೆ ಇ-ಖಾತೆ ಸಿಗಲು ತಡವಾಗಿ ತೊಂದರೆಯಾಗಲಿದೆ. ಆದ್ದರಿಂದ ಅವರು ಕೇಳಿದಷ್ಟು ಕೊಟ್ಟು ಇ-ಖಾತಾ ಮಾಡಿಸಬೇಕಾಗುತ್ತದೆ. ಆದ್ದರಿಂದ MUDA ದ ಮುಖಾಂತರ ಜಿಲ್ಲಾಧಿಕಾರಿಗಳು ಹಿಂದಿನಂತೆ ಮೂಡಾಕ್ಕೆ ವಾಪಸು ಬಂದು ಮುಡಾ ಮುಖಾಂತರವೇ ಇ-ಖಾತೆಯನ್ನು ಮಾಡಿಸಿಕೊಡಬೇಕೆಂದು ಒತ್ತಾಯಿಸುವುದಾಗಿ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.
Key words: E-khata, created, Muda, Sudhakar S Shetty
The post ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕು- ಸುಧಾಕರ್ ಎಸ್ ಶೆಟ್ಟಿ ಒತ್ತಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.