ನವದೆಹಲಿ,ಜನವರಿ,31,2025 (www.justkannada.in): ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದ್ದು ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಸುಗಮ ಕಲಾಪಕ್ಕೆ ಸಹಕಾರ ನೀಡುವಂತೆ ವಿಪಕ್ಷ ಸದಸ್ಯರ ಬಳಿ ಮನವಿ ಮಾಡಿದ್ದಾರೆ.
ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ದೇಶದ ಬಡವರಿಗೆ ಲಕ್ಷ್ಮೀ ದೇವಿಯ ಕೃಪೆ ಸಿಗಲಿ. ಅಧಿವೇಶನದಲ್ಲಿ ಐತಿಹಾಸಿಕ ಬಿಲ್ ಗಳ ಮಂಡನೆಯಾಗಲಿದೆ. ಯುವಕರ ಗಮನದಲ್ಲಿಟ್ಟುಕೊಂಡು ಯೋಜನೆ ಜಾರಿ ಮಾಡಲಾಗುತ್ತದೆ. ಅಧಿವೇಶನದಲ್ಲಿ ಭಾರತದ ಅಭಿವೃದ್ದಿಗಳ ಬಗ್ಗೆ ಚರ್ಚೆ ಮಾಡಿ. ಸುಗಮ ಕಲಾಪಕ್ಕೆ ಸಹಕಾರ ನೀಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.
Key words: Union Budget, Session, developments, PM Modi
The post ಭಾರತದ ಅಭಿವೃದ್ದಿಗಳ ಬಗ್ಗೆ ಚರ್ಚೆ ಮಾಡಿ- ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.