ಬೆಂಗಳೂರು,ಜನವರಿ,29,2025 (www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ಕೆಯುಡಬ್ಲ್ಯುಜೆ ಪ್ರಶಸ್ತಿ ಮೊತ್ತ 2 ಲಕ್ಷ ರೂಗೆ ಏರಿಕೆ ಆಗಿದೆ.
ಎರಡು ವರ್ಷದ ಹಿಂದೆ ಅಕಾಡೆಮಿಗೆ 1.50 ಲಕ್ಷ ರೂ ಚೆಕ್ ಮೂಲಕ ಹಣ ಪಾವತಿ ಮಾಡುವ ಮೂಲಕ ಕೆಯುಡಬ್ಲ್ಯುಜೆ ಪ್ರಶಸ್ತಿಯನ್ನು ಸ್ಥಾಪಿಸಿತ್ತು. ಅದರ ಮುಂದುವರಿದ ಭಾಗವಾಗಿ 50 ಸಾವಿರ ಚೆಕ್‌ನ್ನು ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮತ್ತು ಕಾರ್ಯದರ್ಶಿ ಸಹನ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೆಯುಡಬ್ಲೂೃಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ,ಅಕಾಡೆಮಿಯ ಮುನಿರಾಜ್ ಅವರು ಹಾಜರಿದ್ದರು.
ಕೆಯುಡಬ್ಲ್ಯುಜೆ ಹೋರಾಟದ ಲವಾಗಿ ರಾಜ್ಯದಲ್ಲಿ 1982ರಲ್ಲಿ ಪತ್ರಿಕಾ ಅಕಾಡೆಮಿಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿತ್ತು. ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಅಕಾಡೆಮಿಯು, ಕರ್ನಾಟಕ ಮಾಧ್ಯಮ ಅಕಾಡೆಮಿಯಾಗಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ.
ಕೆಯುಡಬ್ಲ್ಯುಜೆ ಮತ್ತು ಮಾಧ್ಯಮ ಅಕಾಡೆಮಿಯ ನಡುವೆ ಸೌಹಾರ್ಧಯುತ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಮುಂದುವರಿಯಲಿ ಎನ್ನುವ ಸದಾಶಯದೊಂದಿಗೆ ಕೆಯುಡಬ್ಲೂೃಜೆ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷವೂ ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲೂಜೆ ದತ್ತಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರೊಬ್ಬರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಿ ಎನ್ನುವ ಆಶಯ ನಮ್ಮದ್ದಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರತಿಕ್ರಿಯಿಸಿದ್ದಾರೆ.
key words: KUWJ, Endowment Fund, Karnataka Media Academy, increases
The post ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲೂಜೆ ದತ್ತಿನಿಧಿ ಮೊತ್ತ 2 ಲಕ್ಷಕ್ಕೆ ಏರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.