15
Saturday
February, 2025

A News 365Times Venture

ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ವಿರುದ್ಧ “ಅಟ್ರಾಸಿಟಿ” ಪ್ರಕರಣ ದಾಖಲು.

Date:

 

ಬೆಂಗಳೂರು, ಜ.೨೮,೨೦೨೫ : ಇನ್ಫೋಸಿಸ್ ಸಹ ಸಂಸ್ಥಾಪಕ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮಾಜಿ ನಿರ್ದೇಶಕ ಬಲರಾಮ್ ಮತ್ತು ಇತರ 16 ಜನರ ವಿರುದ್ಧ ಎಸ್ಸಿ / ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು.

71 ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ (ಸಿಸಿಎಚ್) ನಿರ್ದೇಶನಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಅಧಿಕಾರಿಗಳು ತಮ್ಮನ್ನು ಸೇವೆಯಿಂದ ತಪ್ಪಾಗಿ ವಜಾಗೊಳಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ತನ್ನನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸುಳ್ಳು ಆರೋಪ ಹೊರೆಸಿ ಸಿಲುಕಿಸಲಾಗಿದೆ. ಜತೆಗೆ ಕ್ರಿಸ್ ಗೋಪಾಲಕೃಷ್ಣನ್ ಟ್ರಸ್ಟಿಗಳ ಮಂಡಳಿಯ ಸದಸ್ಯರಾಗಿರುವ ಸಂಸ್ಥೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ದೂರುದಾರ ದುರ್ಗಪ್ಪ,  ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಸಂಸ್ಥೆಯ ಅಧಿಕಾರಿಗಳು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ್ದಾರೆ ಎಂದು ಅವರು ಆರೋಪಿಸಿದರು.

ದುರ್ಗಪ್ಪ ಅವರು ಸಂಸ್ಥೆಯ ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜಿಯಲ್ಲಿ ಅಧ್ಯಾಪಕರಾಗಿದ್ದರು. 2014 ರಲ್ಲಿ ಹನಿ ಟ್ರ್ಯಾಪ್ ಪ್ರಕರಣದಲ್ಲಿ ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ ಮತ್ತು ಪ್ರಕರಣದ ವಿಚಾರಣೆಯ ಆಧಾರದ ಮೇಲೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ದೂರಿನಲ್ಲಿ  ಹೇಳಿದ್ದಾರೆ.

ತನ್ನನ್ನು ಬೋಧಕ ಹುದ್ದೆಯಿಂದ ತೆಗೆದುಹಾಕಲು ಅಧಿಕಾರಿಗಳು ತಮ್ಮ ವಿರುದ್ಧ ಈ “ ಹನಿ ಟ್ರ್ಯಾಪ್ “ ಪಿತೂರಿ ನಡೆಸಿದ್ದಾರೆ ಎಂದಿರುವ ದುರ್ಗಪ್ಪ,  ಇದಲ್ಲದೆ, ಅಧಿಕಾರಿಗಳು ಜಾತಿ ನಿಂದನೆಯನ್ನು ಬಳಸಿದ್ದಾರೆ ಮತ್ತು ಮತ್ತಷ್ಟು ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದರು.

ಗೋಪಾಲಕೃಷ್ಣನ್ ಅವರಲ್ಲದೆ, ಗೋವಿಂದನ್ ರಂಗರಾಜನ್, ಶ್ರೀಧರ್ ವಾರಿಯರ್, ಸಂಧ್ಯಾ ವಿಶ್ವೇಶ್ವರಯ್ಯ, ಹರಿ ಕೆವಿಎಸ್, ದಾಸಪ್ಪ, ಬಲರಾಮ್ ಪಿ, ಹೇಮಲತಾ ಮಿಶಿ, ಚಟ್ಟೋಪಾಧ್ಯಾಯ ಕೆ, ಪ್ರದೀಪ್ ಡಿ ಸಾವ್ಕರ್ ಮತ್ತು ಮನೋಹರನ್ ಸೇರಿದಂತೆ ಹಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರೆಲ್ಲರೂ ದೂರುದಾರರಿಗೆ ಬೆದರಿಕೆ ಹಾಕಿದ ಮತ್ತು ಅವರು ಸೇವೆಯಲ್ಲಿದ್ದಾಗ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಗೋಪಾಲಕೃಷ್ಣನ್ ಅವರು ಇನ್ಫೋಸಿಸ್ನ ಸಹ-ಸಂಸ್ಥಾಪಕರಲ್ಲಿ ಒಬ್ಬರು ಮತ್ತು 2011 ರಿಂದ 2014 ರವರೆಗೆ ಟೆಕ್ ದೈತ್ಯ ಕಂಪನಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ೨೦೦೭ ರಿಂದ ೨೦೧೧ ರವರೆಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

key words: Infosys co-founder, Kris Gopalakrishnan, booked for ‘atrocity’.

SUMMARY:

Infosys co-founder Kris Gopalakrishnan has been booked for ‘atrocity’. Infosys co-founder Senapati Kris Gopalakrishnan, former Indian Institute of Science (IISc) director Balaram and 16 others have been booked under the SC/ST (Prevention of Atrocities) Act.

The post ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ವಿರುದ್ಧ “ಅಟ್ರಾಸಿಟಿ” ಪ್ರಕರಣ ದಾಖಲು. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഒഡീഷയിലെ എട്ടാം ക്ലാസ് വിദ്യാർത്ഥികളിൽ 50% പേർക്കും ഹരിക്കാൻ അറിയില്ല, 30% പേർക്ക് കുറയ്ക്കാൻ അറിയില്ല; റിപ്പോർട്ട്

ഭുവനേശ്വർ: ഒഡീഷയിലെ എട്ടാം ക്ലാസ് വിദ്യാർത്ഥികളിൽ പകുതി പേർക്കും അടിസ്ഥാന ഗണിത...

Modi in US: `இந்திய குடியேறிகள்; தீவிரவாதம், அணுசக்தி' – மோடி, ட்ரம்ப் பேசியது என்ன?!

அமெரிக்காவில் சட்டத்துக்குப் புறம்பாக வசிக்கும் யாவரையும் இந்தியா திரும்பப் பெற்றுக்கொள்ளும் என்றும்,...

Illegal Soil Mafia: కాకినాడ జిల్లా అన్నవరంలో మట్టి మాఫియా ఆగడాలు..

Illegal Soil Mafia: కాకినాడ జిల్లా అన్నవరంలో మట్టి మాఫియా రెచ్చిపోతుంది....