14
Friday
March, 2025

A News 365Times Venture

ಕರ್ನಾಟಕ ನೀರಾವರಿ ಅಧಿನಿಯಮ 1965ಕ್ಕೆ ತಿದ್ದುಪಡಿ, ಅನುಮೋದನೆ: ಇನ್ನೆರಡು ವಾರದಲ್ಲಿ ಜಾರಿ- ವಿಶ್ವನಾಥ್ ರೆಡ್ಡಿ

Date:

ಮೈಸೂರು,ಜನವರಿ,22,2025 (www.justkannada.in) ನಾಲೆ, ನದಿ, ಜಲಾಶಯಗಳ ಮಾರ್ಗದಲ್ಲಿ ಕಾನೂನುಬಾಹಿರವಾಗಿ ನೀರಿನ ಕೊಳವೆಗಳನ್ನು ಹಾಕುವುದನ್ನು ತಡೆಯಲು ಜಲಸಂಪನ್ಮೂಲ ಇಲಾಖೆ ರೂಪಿಸಿರುವ ನಿಯಮಗಳು ಇನ್ನೆರಡು ವಾರದಲ್ಲಿ ಜಾರಿಯಾಗಲಿದ್ದು, ಅಧಿಕಾರಿಗಳು ತಮಗಿರುವ ಅಧಿಕಾರವನ್ನು ಬಳಸಿಕೊಂಡು ಅಕ್ರಮವನ್ನು ತಡೆಗಟ್ಟಬೇಕು ಎಂದು ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ವಿಶ್ವನಾಥ್ ರೆಡ್ಡಿ ಹೇಳಿದರು.

ಮೈಸೂರು ಬಿಲ್ಡರ್ಸ್‌ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ 2024ರ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ನೀರಾವರಿ ಅಧಿನಿಯಮ 1965ಕ್ಕೆ ತಿದ್ದುಪಡಿ ತಂದು ರಾಜ್ಯಪಾಲರಿಂದ ಅನುಮೋದನೆಗೊಂಡಿದೆ. ಇನ್ನೆರಡು ವಾರದಲ್ಲಿ ನೂತನ ನಿಯಮಗಳು ಜಾರಿಗೆ ಬರಲಿವೆ. ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುವುದರಿಂದ ಹಲವು ತಪ್ಪುಗಳನ್ನು ತಡೆಯಬಹುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಕರ್ನಾಟಕ ನೀರಾವರಿ ಅಧಿನಿಯಮ 1965ರ ಕಾಯಿದೆಗೆ ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಅಧಿಕಾರಿಗಳಿಗೆ ಅಧಿನಿಯಮದ ತಿದ್ದುಪಡಿ ಆಗಿದೆ ಮತ್ತು ಆಗಿಲ್ಲ, ಎಷ್ಟು ಅಂಶಗಳು ಎಷ್ಟು ಗೊತ್ತಿದೆ ಎನ್ನುವುದು ಮುಖ್ಯವಾಗಿರುವ ಕಾರಣ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಯಾವುದೇ ಇಲಾಖೆಯಲ್ಲಿ ಕೆಲಸ ಮಾಡುವಾಗ ಕಾಯಿದೆ ಮತ್ತು ನಿುಂಮಗಳು ಮುಖ್ಯ. ಸಾಮಾಜಿಕ ವ್ಯವಸ್ಥೆಯು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಲು ನಿರ್ದಿಷ್ಟ ಪದ್ದತಿ ಅನುಸರಿಸಬೇಕು ಎಂದರು.

ನೀರಾವರಿ ಕಾಯಿದೆ ಮೊದಲಿನಿಂದಲೂ ಇದೆ. ಆದರೆ, ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಉತ್ತರ ಕರ್ನಾಟಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ದಾರಿಯುದ್ದಕ್ಕೂ ಪೈಪ್ ಒಡೆದರೆ ಕೊನೆಯ ಭಾಗಕ್ಕೆ ನೀರು ತಲುಪಲ್ಲ ಎನ್ನುವುದು ಕಂಡುಬಂದಿತು. ಈ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದಾಗ ಇಂತಹ ತಪ್ಪುಗಳು ನಡೆದರೆ ಕ್ರಮಕೈಗೊಳ್ಳುವ ಅಧಿಕಾರ ಇಲ್ಲದಿರುವುದು ಗೊತ್ತಾಯಿತು. ಹಾಗಾಗಿ, ನಿಯಮಕ್ಕೆ ತಿದ್ದುಪಡಿ ತಂದು ಅಧಿಕಾರ ನೀಡಬೇಕೆಂದು ಕರಡು ರಚನೆ ಮಾಡುವ ಹೊತ್ತಿಗೆ ಸರ್ಕಾರದ ಅವಧಿ ಮುಗಿದು ಹೋಗಿತ್ತು. ನಂತರ, ಡಿ.ಕೆ.ಶಿವಕುಮಾರ್ ಅವರೇ ಉಪಮುಖ್ಯಮಂತ್ರಿಯ ಜತೆಗೆ ಮತ್ತೊಮ್ಮೆ ಜಲ ಸಂಪನ್ಮೂಲ ಸಚಿವರಾಗಿದ್ದರಿಂದ ಮತ್ತೆ ಕೈಗೆತ್ತಿಕೊಂಡು ತಿದ್ದುಪಡಿ ಮಾಡಲು ನಿರ್ಧರಿಸಲಾಯಿತು. ಅಧಿಕಾರ ಕೊಡದಿದ್ದರೆ ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು ಉಪ ಮುಖ್ಯಮಂತ್ರಿಗಳು ಕಾನೂನು ಇಲಾಖೆಯ ಅಭಿಪ್ರಾಯದಂತೆ ಹದಿನಾಲ್ಕು ಇಲಾಖೆಗಳ ಸಮ್ಮತಿ ಪಡೆದು ಕರಡು ರಚಿಸಲಾಯಿತು. ಈಗ ವಿಧಾನಸಭೆ, ವಿಧಾನ ಪರಿಷತ್‌ ನಲ್ಲಿ ಅಂಗೀಕಾರಗೊಂಡು ರಾಜ್ಯಪಾಲರಿಂದ ಒಪ್ಪಿಗೆ ದೊರೆತಿದೆ. ಈಗ ಅಧಿಕಾರವನ್ನು ಚಲಾಯಿಸಲು ಅವಕಾಶ ಹೊಂದಿರುವ ಕಾರಣ ಇನ್ನೆರಡು ವಾರದಲ್ಲಿ ನಿಯಮಗಳು ಜಾರಿಗೆ ಬರಲಿದ್ದು,ತಪ್ಪು ಎಸಗದಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬಹುದಾಗಿದೆ ಎಂದರು.

ನಂತರ ಕರ್ನಾಟಕ ನೀರಾವರಿ ಅಧಿನಿಯಮ-2024ರ  ಮುನ್ನುಡಿ ಮತ್ತು ಅವಲೋಕನ ಕುರಿತು ಉಪಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ ಕೆ. ಜೈಪ್ರಕಾಶ್, ಅಧಿನಿಯಮದ ಪ್ರಮುಖಾಂಶಗಳು ಕುರಿತು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಂಪನಿ ಕಾರ್ಯದರ್ಶಿ ಎಂ.ಎಸ್.ಗಿರೀಶ್, ಅರೆನ್ಯಾಯಾಂಗ ಕಾರ್ಯ ವಿಧಾನ ಕುರಿತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸುನಿಲ್ ಹೆಗಡೆ ವಿಷಯ ಮಂಡಿಸಿದರು.

ಉಪ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ ಕೆ.ಜೈಪ್ರಕಾಶ್, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಆರ್.ಎಲ್.ವೆಂಕಟೇಶ್, ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಬಿ.ಎನ್.ಫಣಿರಾಜ್, ಜಲಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿ ಸುಜಾತ ಎಲ್. ಜಾಧವ್, ಕರ್ನಾಟಕ ಇಂಜಿನಿಯರ್ ಸಂಶೋಧನಾ ಸಂಸ್ಥೆ ನಿರ್ದೇಶಕ ಕೆ.ಜಿ.ಮಹೇಶ್, ಹೇವಾವತಿ  ಮುಖ್ಯ ಇಂಜಿನಿುಂರ್ ಜಿ.ಸಿ.ಮಂಜುನಾಥ್,ಸಣ್ಣ ನೀರಾವರಿ ಮತ್ತು ಅಂತರ್ಜಲ ವೃತ್ತ ಅಧೀಕ್ಷಕ ಇಂಜಿನಿಯರ್ ಪ್ರಶಾಂತ್ ಬಿ ಗಡದಾನಪ್ಪ ಗೋಳ್, ಕಾಡಾ ಆಡಳಿತಾಧಿಕಾರಿ ಶಿವಮಹದೇವ್ಂಯು ಹಾಜರಿದ್ದರು.

Key words: Amendment, Karnataka Irrigation Act 1965, approved, Implementation, Vishwanath Reddy

The post ಕರ್ನಾಟಕ ನೀರಾವರಿ ಅಧಿನಿಯಮ 1965ಕ್ಕೆ ತಿದ್ದುಪಡಿ, ಅನುಮೋದನೆ: ಇನ್ನೆರಡು ವಾರದಲ್ಲಿ ಜಾರಿ- ವಿಶ್ವನಾಥ್ ರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘എന്നെ വളര്‍ത്തിയെടുക്കുന്നതില്‍ നിങ്ങള്‍ക്കെന്ത് പങ്ക്’; ഇടതുപക്ഷത്തിന് വേണ്ടി പാടരുതെന്ന് പറയുന്നവരോട് ഗായിക പുഷ്പാവതി

കോഴിക്കോട്: ഇടതുപക്ഷത്തിന് വേണ്ടി പാടരുതെന്ന് പറയുന്നവര്‍ക്ക് മറുപടിയുമായി ഗായിക പുഷ്പാവതി. തന്നോട്...

`₹'-க்கு பதில் `ரூ' : “பிராந்திய பேரினவாதம்'' – திமுகவை தாக்கிய நிர்மலா சீதாராமன்!

தேசிய கல்விக் கொள்கையை அமல்படுத்துவதில் எழுந்த சர்ச்சையைத் தொடர்ந்து, தமிழகத்தில் இந்தி...

IPL 2025: ఇంగ్లండ్ స్టార్ బ్యాటర్‌ హ్యారీ బ్రూక్‌పై రెండేళ్ల నిషేధం!

ఇంగ్లండ్ స్టార్ బ్యాటర్‌ హ్యారీ బ్రూక్‌కు భారత క్రికెట్ నియంత్రణ మండలి...

ಆರ್. ಎಸ್.‌ ಎಸ್.‌ ಕಾರ್ಯಕರ್ತ ರಾಜು ಹತ್ಯೆಗೆ ೯ ವರ್ಷ: ಮಸೀದಿ ಬೀಗ ತೆಗೆಯುವ ಬಗ್ಗೆ ಡಿಸಿ ನೇತೃತ್ವದಲ್ಲಿ  ನಾಳೆ ಸಭೆ.

  ಮೈಸೂರು, ಮಾ.೧೩,೨೦೨೫:  ನಗರದ ಕ್ಯಾತಮಾತರಮಹಳ್ಳಿ ನಿವಾಸಿ, ಆರ್.ಎಸ್.ಎಸ್.‌ ಕಾರ್ಯಕರ್ತ ರಾಜು...