ಮೈಸೂರು,ಏಪ್ರಿಲ್,6,2025 (www.justkannada.in): ಇಂದು ಶ್ರೀರಾಮ ನವಮಿ ಹಿನ್ನೆಲೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಶ್ರದ್ದಾ ಭಕ್ತಿಯೊಂದಿಗೆ ಶ್ರೀರಾಮ ನವಮಿ ಆಚರಣೆ ಮಾಡಲಾಗುತ್ತಿದೆ.
ಶ್ರೀರಾಮನವಮಿ ಹಿನ್ನೆಲೆ ಮೈಸೂರಿನ ವಿವಿಧೆಡೆಗಳಲ್ಲಿರುವ ಶ್ರೀರಾಮಮಂದಿರಗಳಲ್ಲಿ ಇಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿದ್ದು, ಎಲ್ಲೆಡೆ ಮರ್ಯಾದ ಪುರುಷೋತ್ತಮ, ಪಿತೃ ವಾಕ್ಯ ಪರಿಪಾಲಕ ಶ್ರೀರಾಮನ ಸ್ಮರಣೆ ಮಾಡಲಾಗುತ್ತಿದೆ.
ಶ್ರೀರಾಮಪೇಟೆಯಲ್ಲಿರುವ ಶ್ರೀರಾಮಮಂದಿರದಲ್ಲಿ 135ನೇ ವರ್ಷದ ಶ್ರೀ ರಾಮೋತ್ಸವ ಆಯೋಜನೆ ಮಾಡಲಾಗಿದ್ದು ರಾಮಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಕೆ ಬಳಿಕ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಗುತ್ತಿದೆ. ರಾಮಮಂದಿರಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು ರಾಮಮಂದಿರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ಶ್ರೀ ರಾಮಾಭ್ಯುದಯ ಸಭಾದ ಅಧ್ಯಕ್ಷ ಡಾ. ಎನ್ ಶ್ರೀರಾಮ್ ಮಾಹಿತಿ ನೀಡಿದ್ದಾರೆ.
Key words: Sri Rama Navami, Mysore, Special Pooja
The post ಮೈಸೂರಿನಲ್ಲಿ ಶ್ರೀರಾಮ ನವಮಿ ಆಚರಣೆ: ವಿಶೇಷ ಪೂಜೆ, ಮಜ್ಜಿಗೆ ಪಾನಕ ವಿತರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.