29
Tuesday
April, 2025

A News 365Times Venture

ವಕ್ಫ್‌ ತಿದ್ಧುಪಡಿ ಮಸೂದೆ ಸಂವಿಧಾನ ವಿರೋಧಿ- ಸಚಿವ ದಿನೇಶ್‌ ಗುಂಡೂರಾವ್

Date:

ಮಂಗಳೂರು,ಏಪ್ರಿಲ್,5,2025 (www.justkannada.in):  ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ವಕ್ಫ್‌ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿಯಾಗಿದೆ.  ಅಂಗೀಕಾರವಾಗಿರುವ ಈ ವಕ್ಫ್‌ ತಿದ್ದುಪಡಿ ಮಸೂದೆ  ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಯಾರನ್ನೂ ಗಮನಕ್ಕೆ ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ವಕ್ಫ್‌ ವಿಚಾರದಲ್ಲಿ ದಬ್ಬಾಳಿಕೆ ನಡೆಸುತ್ತಿದೆ. ವಕ್ಫ್‌ ವಿಚಾರ ಸೂಕ್ಷ್ಮವಾಗಿದ್ದು, ಇದರಲ್ಲಿ ದ್ವೇಷ ಸಾಧಿಸುವಂಥದ್ದು ಸರಿಯಲ್ಲ. ರಾಜ್ಯದ ಭೂಮಿಯಲ್ಲಿ ಹಿಂದೂ ಧರ್ಮದ ಟ್ರಸ್ಟ್‌ಗಳು ಕೂಡ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಇದೆ. ವಕ್ಫ್ ಕೂಡ ಕೆಲವು ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿ ಇದೆ. ಇಂತಹ ಕ್ರಮಗಳು ಭ್ರಷ್ಟಾಚಾರದಿಂದ ಕೂಡಿದೆ ಎಂದರು.

ಮಡಿಕೇರಿ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಮಾಹಿತಿ ತಿಳಿದು ಪ್ರತಿಕ್ರಿಯೆ ನೀಡುತ್ತೇನೆ. ಯಾವುದೇ ಪ್ರಕರಣ ಕಾನೂನು ಪ್ರಕಾರವೇ ಮುಂದುವರಿಯಬೇಕು.  ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂಥದ್ದು ಏನೂ ಇಲ್ಲ. ಇವೆಲ್ಲಾ ಗಂಭೀರ ಮತ್ತು ಸೂಕ್ಷ್ಮವಾದ ವಿಷಯಗಳು, ಒಂದೇ ಸಮನೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದು ತಿಳಿಸಿದರು.

Key words: Waqf Amendment Bill, unconstitutional, Minister, Dinesh Gundu Rao

The post ವಕ್ಫ್‌ ತಿದ್ಧುಪಡಿ ಮಸೂದೆ ಸಂವಿಧಾನ ವಿರೋಧಿ- ಸಚಿವ ದಿನೇಶ್‌ ಗುಂಡೂರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಬಿಜೆಪಿಯಿಂದ ಕಪ್ಪುಪಟ್ಟಿ ಪ್ರದರ್ಶನ

ಬೆಳಗಾವಿ,ಏಪ್ರಿಲ್,28,2025 (www.justkannada.in): ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ   ಸಿಎಂ ಸಿದ್ದರಾಮಯ್ಯ ಭಾಷಣ...

പൈജാമയും കുര്‍ത്തയും കണ്ടതോടെ പ്രകോപിതരായി; ബീഹാറില്‍ മാധ്യമപ്രവര്‍ത്തകനെയും സഹോദരനെയും ആക്രമിച്ച് ഹിന്ദുത്വര്‍

പാട്ന: ബീഹാറില്‍ മുസ്‌ലിം വിഭാഗത്തില്‍ നിന്നുള്ള മാധ്യമപ്രവര്‍ത്തകനെ സംഘം ചേര്‍ന്ന് ആക്രമിച്ച്...

Vaibhav Suryavanshi: సిక్సులతో విరుచకపడ్డ వైభవ్ సూర్యవంశీ.. రెండో ఫాస్టెస్ట్ సెంచరీ నమోదు

Vaibhav Suryavanshi: జైపూర్‌లోని సవాయ్ మాన్సింగ్ స్టేడియంలో గుజరాత్ టైటాన్స్, రాజస్థాన్...