31
Monday
March, 2025

A News 365Times Venture

ಕಿಡಿಗೇಡಿಗಳ ಕೃತ್ಯ: ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ.

Date:

ಮೈಸೂರು,ಮಾರ್ಚ್,24,2025 (www.justkannada.in): ಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರವಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಕಿಡಿಗೇಡಿಗಳ ಈ ಕೃತ್ಯ ಮನಕಲಕುವಂತಿದ್ದು, ಇದೀಗ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೈಗಾರಿಕಾ ಪ್ರದೇಶದ ಜಮೀನಿನಲ್ಲಿ  ಹಸು ಮೇವು ಮೇಯುತಿದ್ದಾಗ ಘಟನೆ ನಡೆದಿದೆ.

ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬವರಿಗೆ ಸೇರಿದ ಹಸು ಇದಾಗಿದೆ. ಚನ್ನನಂಜೇಗೌಡ ಅವರು ಗ್ರಾಮದ ವಾಟರ್ ಟ್ಯಾಂಕ್ನ ಬಳಿ ಜಾನುವಾರುಗಳು ಮೇವು ಮೇಯಲು ಬಿಟ್ಟಿದ್ದಾರೆ. ಈ ಮಧ್ಯೆ ಕಿಡಿಗೇಡಿಗಳು ಕಾಡು ಹಂದಿ ಬೇಟೆಗೆ ಅದೇ ಜಾಗದಲ್ಲಿ ಸಿಡಿಮದ್ದು ಅಡಗಿಸಿಟ್ಟಿದ್ದರು. ಈ ನಡುವೆ ಹಸು ಮೇಯುತ್ತಿದ್ದ ವೇಳೆ ಸಿಡಿಮದ್ದು ಸ್ಫೋಟಗೊಂಡು ಗಾಯಗೊಂಡಗೊಂಡಿದೆ. ಸ್ಫೋಟದ ರಭಸಕ್ಕೆ ಹಸುವಿನ ಮುಖ ಛಿದ್ರವಾಗಿದ್ದು, ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಪೊಲೀಸರು, ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Key words: Mysore,  Firecrackers,  explode, cow, mouth.

The post ಕಿಡಿಗೇಡಿಗಳ ಕೃತ್ಯ: ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മ്യാന്മറിലെ ഭൂചലനത്തില്‍ മരണസംഖ്യ 2000 കടന്നു; 3900 പേര്‍ക്ക് പരിക്ക്

നേപ്യിഡോ: മ്യാന്മറിലുണ്ടായ ഭൂചലനത്തില്‍ മരണപ്പെട്ടവരുടെ എണ്ണം 2000 കവിഞ്ഞതായി റിപ്പോര്‍ട്ട്. രക്ഷാപ്രവര്‍ത്തനം...

Hamas: నిరసనలకు భయపడి సొంత ప్రజల్ని చంపేస్తున్న ‘‘హమాస్’’

పాలస్తీనియన్ ఉగ్రవాద సంస్థ హమాస్ సొంత ప్రజల పైనే తన కోపాన్ని...

ಮೈಸೂರಿನಲ್ಲಿ ಯುಗಾದಿ ಸಂಗೀತೋತ್ಸವಕ್ಕೆ ಚಾಲನೆ: ಗಾಯಕರಿಂದ  ಸಂಗೀತಾ ರಸದೌತಣ

ಮೈಸೂರು,ಮಾರ್ಚ್,31,2025 (www.justkannada.in): ಮೈಸೂರು ಅರಮನೆ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ...