26
Wednesday
March, 2025

A News 365Times Venture

‘ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ’ ತಿದ್ದುಪಡಿ ವಿಧೇಯಕ ಅಂಗೀಕಾರ

Date:

ಬೆಂಗಳೂರು ,ಮಾರ್ಚ್,19,2025 (www.justkannada.in): ರಾಜ್ಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು ವಿಧಾನಸಭೆಯಲ್ಲಿ ಇಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ.

ವಿಧಾನಸಭೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು  ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ ಮಂಡಿಸಿದ್ದರು. ಮಂಡ್ಯದಲ್ಲಿ ಪ್ರತ್ಯೇಕ ಕೃಷಿ ವಿಶ್ವವಿದ್ಯಾಲಯವಾಗಿ ಅವಕಾಶ ಮಾಡಿಕೊಡುವ ವಿಧೇಯಕ ಇದಾಗಿದೆ.

ಇದೀಗ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿದ್ದು, ಮಂಡ್ಯ ವಿಸಿ ಫಾರ್ಮ್ ನಲ್ಲಿ ಪ್ರತ್ಯೇಕ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧರಿಸಲಾಗಿದೆ. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಯ ಬೆಳೆಗಳ ಉತ್ಪಾದನಾ ಕ್ಷೇತ್ರದಲ್ಲಿ ಅಧ್ಯಯನ ಸಂಶೋಧನೆಗೆ ಅವಕಾಶವಿದೆ.

ಇನ್ನು ಕೃಷಿ ವಿವಿಯಲ್ಲಿ ತೋಟಗಾರಿಕೆ ವಿಭಾಗ ವಿಂಗಡಣೆಗೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ವಿರೋಧ ವ್ಯಕ್ತಪಡಿಸಿದರು.  ಈಗಾಗಲೇ ಮಂಡ್ಯ ವಿವಿಯಲ್ಲಿ ತೋಟಗಾರಿಕೆ ವಿಭಾಗ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಇದೆ. ಇದರಿಂದ ಬಾಗಲಕೋಟೆ ತೋಟಗಾರಿಕೆ ವಿವಿಗೆ ಹೊಡೆತ ಬೀಳಲಿದೆ ಎಂದು ಯತ್ನಾಳ್ ತಿಳಿಸಿದರು.

Key words: ‘University of Agricultural Sciences’ Amendment, Assembly

The post ‘ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ’ ತಿದ್ದುಪಡಿ ವಿಧೇಯಕ ಅಂಗೀಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

GT vs PBKS: ఉత్కంఠ పోరులో పంజాబ్ గెలుపు..

ఐపీఎల్ 2025లో భాగంగా గుజరాత్ టైటాన్స్‌తో జరిగిన ఉత్కంఠ పోరులో పంజాబ్...

ಲಾಂಗ್ ಹಿಡಿದು ರೀಲ್ಸ್  ಪ್ರಕರಣ: ರಜತ್, ವಿನಯ್ ಕರತಂದು ಪೊಲೀಸರಿಂದ ಸ್ಥಳ ಮಹಜರು

ಬೆಂಗಳೂರು,ಮಾರ್ಚ್,25,2025 (www.justkannada.in): ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ...

‘അവനിലൊരു നാച്ചുറല്‍ ഗെയിമുണ്ട്, എല്ലാം അവന്റെ കഴിവ്’ മുംബൈ ഇന്ത്യന്‍സ് താരം വിഘ്നേഷിന് പ്രചോദനമേകിയ ഷെരീഫ് ഉസ്താദ്

മലപ്പുറം: സമൂഹ മാധ്യമങ്ങളില്‍ ചര്‍ച്ചയായി മുംബൈ ഇന്ത്യന്‍സ് താരമായ മലപ്പുറം സ്വദേശി...