ಮೈಸೂರು, ಮಾ.13,2025: ಹೈಕೋರ್ಟ್ ನಿರ್ದೇಶನದ ಮೇರೆಗೆ ಕ್ಯಾತಮಾರನಹಳ್ಳಿಯ ಮಸೀದಿಗೆ ಬೀಗ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ.
ಒಂಬತ್ತು ವರ್ಷಗಳ ಹಿಂದೆ, ಆರ್. ಎಸ್. ಎಸ್. ಕಾರ್ಯಕರ್ತ ರಾಜು ಹತ್ಯೆ ಘಟನೆ ಬಳಿಕ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಾಯತ್ರಿಪುರಂ ಎರಡನೇ ಹಂತ ಕ್ಯಾತಮಾರನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಮಸೀದಿಗೆ ಬೀಗ ಹಾಕಲಾಗಿತ್ತು.
ಬಳಿಕ Aleema Sadlys Education institution & Masjid-E-Siddique-E-Akbar Trust ಬೀಗ ಹಾಕಿರುವುದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯ, ಮಸೀದಿಗೆ ಬೀಗ ಹಾಕಿರುವುದನ್ನು ಮುಂದುವರಿಸುವ ಅಥವಾ ಸದರಿ ಟ್ರಸ್ಟ್ ಬೀಗ ತೆರೆದು ಕಾರ್ಯ ಪರಾಮರ್ಶಿಸಲು ಆಸಕ್ತ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳ ಅಭಿಪ್ರಾಯ ಪಡೆಯಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಈ ಸಂಬಂಧ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಸೋಮವಾರ (ಮಾ. 10 ರಂದು ) ಕರೆದಿದ್ದ ಸಭೆ ಕಾರಾಣಾಂತರಗಳಿಂದ ನಡೆಯಲಿಲ್ಲ. ಬದಲಿಗೆ ಸಭೆಯನ್ನು ನಾಳೆಗೆ (ಮಾ. 14 ಕ್ಕೆ ) ಮುಂದೂಡಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದೆ.
ದಶಕದ ಬಳಿಕ ಮುನ್ನಲೆಗೆ:
ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣ ನಡೆದು ದಶಕದ ಬಳಿಕ ಮತ್ತೆ ಈಗ ಮಸೀದಿಗೆ ಬೀಗ ಹಾಕಿರುವ ವಿಷಯ ಮುನ್ನಲೆಗೆ ಬಂದಿದೆ.
ಈ ಘಟನೆ ಬಳಿಕ ವಿವಾದಿತ ಮಸೀದಿಗೆ ಬೀಗ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಪರವಾಗಿ ಮುನಾವರ್ ಪಾಶ ಕೋರ್ಟ್ ಮೊರೆ ಹೋಗಿದ್ದರು. (WRIT PETITION NO. 49775 OF 2019 (GM-POLICE). ಇದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಆಗ ಪ್ರಕರಣವನ್ನು ಸ್ಥಳೀಯಮಟ್ಟದಲ್ಲೇ ಮಾತುಕತೆ ನಡೆಸಿ 12 ವಾರಗಳಲ್ಲಿ ಇತ್ಯರ್ಥ ಪಡಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಕೋರ್ಟ್ ನಿರ್ದೇಶನ ನೀಡಿತು.
key words: Mosque dispute, Meeting, District Collector, Mysore, High court
Mosque dispute: Meeting to be held tomorrow at 11 am under the chairmanship of the District Collector.
The post BREAKING NOW: ಮಸೀದಿ ವಿವಾದ , ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.