15
Saturday
March, 2025

A News 365Times Venture

ಧರ್ಮಸ್ಥಳದ ರೇಪ್ ಅಂಡ್ ಮರ್ಡರ್  :  “ಸೌಜನ್ಯ” ಪರ ನಾನು ನಿಲ್ಲುತ್ತೇನೆ,  ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ.

Date:

 

ಮೈಸೂರು, ಮಾ.13, 2025:  ನಗರ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಭೇಟಿ. ಕಾರಾಗೃಹದಲ್ಲಿ ಏರ್ಪಡಿಸಿರುವ  ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿ.

ಈ ವೇಳೆ, ಕಾರಾಗೃಹಕ್ಕೆ ಭೇಟಿ ಕೊಡುತ್ತಿದ್ದಂತೆ ಅಹವಾಲುಗಳ ಕೊಡಲು ಮುಗಿ ಬಿದ್ದ ಮಹಿಳೆಯರು. ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ ಪತ್ರಗಳ ಸಲ್ಲಿಸಿದ  ಸಾರ್ವಜನಿಕರು. ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ  ಅವಕಾಶ ಕೊಡದ ಕಾರಾಗೃಹ ಸಿಬ್ಬಂದಿ . ಹೊರ ಭಾಗದಲ್ಲೇ ನಿಂತು ಸಾರ್ವಜನಿಕರ ಜೊತೆ ಕೆಲ ಕಾಲ ಸಮಸ್ಯೆ ಆಲಿಸಿದ ನಾಗಲಕ್ಷ್ಮಿ ಚೌದರಿ.

ಸೌಜನ್ಯ ಕೊಲೆ ಪ್ರಕರಣ ಮತ್ತೆ ಮುನ್ನಲೆಗೆ ಬಂದ ವಿಚಾರ, ಸೌಜನ್ಯ ಕೊಲೆ ಪ್ರಕರಣ  ಕುರಿತು ನ್ಯಾಯಾಲಯದಿಂದಲೂ ತೀರ್ಪು ಬಂದಿದೆ. ನಾನು ಒಂದು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ನ್ಯಾಯಾಲಯದ ತೀರ್ಪನ್ನು ಪ್ರಶ್ನೆ ಮಾಡಲಿಕ್ಕೆ ಆಗಲ್ಲ. ನಾನು ಮಾತ್ರ ಆ ಹೆಣ್ಣು ಮಗಳ ಪರವಾಗಿ ನಿಲ್ಲುತ್ತೇನೆ. ಆ ಪ್ರಕರಣದಲ್ಲಿ ಸಾವಿಗೀಡಾದ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವುದು ನನ್ನ ಆಶಯ. ಸಂತ್ರಸ್ತ ಕುಟುಂಬ ಭೇಟಿ ಮಾಡಿಲ್ಲ. ಧರ್ಮ ಸ್ಥಳಕ್ಕೆ ಹೋದಾಗ ಭೇಟಿ ಮಾಡುತ್ತೇನೆ.

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣ ಆಗುತ್ತಿದೆ. ಅದನ್ನ ಪ್ರಶ್ನೆ ಮಾಡುವ ಅಧಿಕಾರ ವಿಪಕ್ಷಗಳಿಗಿಲ್ಲ. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಒಳ್ಳೆ ಕೆಲಸ ಸರ್ಕಾರ ಮಾಡುತ್ತಿದೆ. ಗ್ಯಾರಂಟಿಗಳಿಂದ ಒಬ್ಬ ಹೆಣ್ಣು ಮಗಳಿಗೆ ತಿಂಗಳಿಗೆ ನಾಲ್ಕೈದು ಸಾವಿರ ಉಳಿತಾಯ ಆಗುತ್ತದೆ. ಅದರ ಬಗ್ಗೆ ಟೀಕೆ ಮಾಡೋದು ತಪ್ಪು. ಮೈಸೂರಿನಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿಕೆ.

ಕೊಪ್ಪಳದಲ್ಲಿ ವಿದೇಶಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಪ್ರಕರಣ ವಿಚಾರ, ಮೈಸೂರಿನಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯೆ.ಇದೊಂದು ಅಮಾನವೀಯ ಕೃತ್ಯ. ಈಗಾಗಲೇ ಅಲ್ಲಿನ ಎಸ್ಪಿಗೆ ಪತ್ರ ಬರೆದಿದ್ದೇ‌ನೆ. ಹಂಪಿಯನ್ನ ನೋಡಲು ಸಾಕಷ್ಟು ವಿದೇಶಿಗರು ಅಲ್ಲಿಗೆ ಬರುತ್ತಾರೆ. ಅಂಥವರ ಮೇಲೆ ಹೇಯ ಕೃತ್ಯ ನಡೆಸಿದರೆ ಯಾವ ಸಂದೇಶ ಹೋಗುತ್ತದೆ. ಇದೊಂದು ತಲೆ ತಗ್ಗಿಸುವ ಪರಿಸ್ಥಿತಿ . ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಜೊತೆಗೆ ಅಲ್ಲಿರುವ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ಗಳನ್ನ ಬಂದ್ ಮಾಡಬೇಕು. ಅಲ್ಲಿಗೆ ಬರುವಂತ ವಿದೇಶಿಗರಿಗೆ ಆಹ್ವಾನ ನೀಡಬೇಕು. ಜತೆಗೆ  ಹೆಚ್ಚಿನ ಭದ್ರತೆ ಕೊಡಬೇಕು. ಮೈಸೂರಿನಲ್ಲಿ ಮಹಿಳಾ ಆಯೋಗದ ಅಧ್ಯಕ್ಷರ ಹೇಳಿಕೆ.

key words: Dharmasthala, Rape and Murder, Nagalakshmi Chaudhary, State Women’s Commission.

Dharmasthala Rape and Murder: I stand for “soujanya”, says Nagalakshmi Chaudhary, Chairperson of the State Women’s Commission.

The post ಧರ್ಮಸ್ಥಳದ ರೇಪ್ ಅಂಡ್ ಮರ್ಡರ್  :  “ಸೌಜನ್ಯ” ಪರ ನಾನು ನಿಲ್ಲುತ್ತೇನೆ,  ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಯುವತಿಯೊಂದಿಗೆ ಅನೈತಿಕ ಸಂಬಂಧ: ಯುವಕನ ಬರ್ಬರ ಹತ್ಯೆ

ಮೈಸೂರು,ಮಾರ್ಚ್,14,2025 (www.justkannada.in):  ಮದುವೆಯಾಗಿದ್ದರೂ ಬೇರೊಬ್ಬ ಯುವತಿಯ  ಜೊತೆ ಅನೈತಿಕ ಸಂಬಂಧ...

ഫലസ്തീൻ അനുകൂല പ്രതിഷേധത്തിൽ പങ്കെടുത്തു; വിസ റദ്ദാക്കപ്പെട്ട ഇന്ത്യൻ സ്കോളർ അമേരിക്ക വിട്ടു

വാഷിങ്ടൺ: ഫലസ്തീൻ അനുകൂല പ്രതിഷേധങ്ങളിൽ പങ്കെടുത്തതിന് വിസ റദ്ദാക്കപ്പെട്ട ഇന്ത്യൻ ഡോക്ടറൽ...