ಮೈಸೂರು, ಮಾ.11,2025 : ಇಲ್ಲಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಸತೀಶ್ ಗಡಿಪಾರು ಆದೇಶಕ್ಕೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವಿಗೆ ಕೋರಿ ಪೊಲೀಸರು ಇಂದು ಅರ್ಜಿ ಸಲ್ಲಿಸಿದರು.
ವಿವಾದತ್ಮಕ ಪೋಸ್ಟ್ ನಿಂದ ಗಲಭೆಗೆ ಕಾರಣವಾದ ಆರೋಪ ಎದುರಿಸುತ್ತಿರುವ ಸತೀಶ್ ಅಲಿಯಾಸ್ ಪಾಂಡುರಂಗ ನ್ನನು ಗಡಿಪಾರು ಮಾಡುವ ಸಲುವಾಗಿ ಪೊಲೀಸರು ನೀಡಿದ್ದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ನಿರ್ಬಂಧ ತೆರವುಗೊಳಿಸುವ ಸಲುವಾಗಿ ಪೊಲೀಸರು ಇಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ರಿವಿಜನ್ ಅರ್ಜಿ ಸಲ್ಲಿಸಿದ್ದರು.
ಈ ವೇಳೆ ಆರೋಪಿ ಪರ ವಕೀಲ ಅ.ಮ.ಭಾಸ್ಕರ್ , ತಡೆಯಾಜ್ಞೆ ತೆರವಿಗೆ ಆಕ್ಷೇಪಿಸಿದರು. ಆರೋಪಿ ಸತೀಶ್ ವಿರುದ್ಧ ಪೊಲೀಸರು ಹೊರಡಿಸಿರುವ ಗಡಿಪಾರು ಆದೇಶ ಕಾನೂನು ಬಾಹಿರ ಎಂಬುದನ್ನು ಪುನರುಚ್ಚರಿಸಿದರು. ಈ ಆದೇಶ ಹೊರಡಿಸುವ ಮುನ್ನ ಯಾವುದೇ ನಿಯಮವನ್ನು ಪಾಲಿಸಿಲ್ಲ. ಆರೋಪಿಯ ಆರೋಪದ ಬಗ್ಗೆ ಉಲ್ಲೇಖವಿಲ್ಲ, ತನಿಖಾ ವರದಿ ಸಹ ಇಲ್ಲ. ಜತೆಗೆ ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಸಹ ಇಲ್ಲ. ಇಷ್ಟಾದರೂ ಯಾವ ಕಾರಣಕ್ಕಾಗಿ ಗಡಿಪಾರು ನೋಟಿಸ್ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಪಟ್ಟು ಹಿಡಿದರು.
ಪ್ರಕರಣದ ವಿಚಾರಣೆ ಆಲಿಸಿದ ನ್ಯಾಯಾಧೀಶರು, ಮಾ. 15 ಕ್ಕೆ ತೀರ್ಪು ಕಾಯ್ದಿರಿಸಿ ಮುಂದೂಡಿದರು.
ಹಿನ್ನೆಲೆ:
ಗಡಿಪಾರಿನ ಭೀತಿ ಎದುರಿಸುತ್ತಿದ್ದ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗ ಫೆ. 20 ರಂದು ಡಿಸಿಪಿ ಎದುರು ಖುದ್ದು ಹಾಜರಾಗಲು ಆಗಮಿಸಿದ್ದ. ಗಡಿಪಾರು ಮಾಡುವ ಕುರಿತು ಸತೀಶ್ ಗೆ ನೋಟಿಸ್ ಜಾರಿ ಮಾಡಿದ್ದ ಪೊಲೀಸರು. ಈ ಸತೀಶ್ ಹಾಗು ಅವರ ಪರ ವಕೀಲ ಅ.ಮ.ಭಾಸ್ಕರ್ ಆಗಮಿಸಿದ್ದರು. ಆದರೆ ಅಂದು ಡಿಸಿಪಿ ಅವರು ಲಭ್ಯವಿರದ ಕಾರಣ ವಿಚಾರಣೆ ನಡೆದಿರಲಿಲ್ಲ. ಬಳಿಕ ಕೋರ್ಟ್ ಮೊರೆ ಹೊಕ್ಕ ಆರೋಪಿ ಸತೀಶ್ ಪರ ವಕೀಲರಾದ ಅ.ಮ.ಭಾಸ್ಕರ್, ನ್ಯಾಯಾಲಯದಲ್ಲಿ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ತಂದರು.
ಇದೀಗ ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಪೊಲೀಸರು ರಿವಿಜನ್ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆದು ತೀರ್ಪನ್ನು ಮಾ. 15 ಕ್ಕೆ ಮುಂದೂಡಲಾಗಿದೆ.
KEY WORDS: MYSORE CRIME NEWS, Police, vacate stay , Satish alias Panduranga, “exile” notice.
MYSORE CRIME NEWS: Police move court to vacate stay on Satish alias Panduranga’s “exile” notice.
The post MYSORE CRIME NEWS: ಸತೀಶ್ ಅಲಿಯಾಸ್ ಪಾಂಡುರಂಗ “ ಗಡಿಪಾರು” ನೋಟಿಸ್ ತಡೆಯಾಜ್ಞೆ ತೆರವಿಗೆ ಕೋರ್ಟ್ ಮೊರೆ ಹೊಕ್ಕ ಪೊಲೀಸರು. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.