ಚಾಮರಾಜನಗರ,ಮಾರ್ಚ್,11,2025 (www.justkannada.in): ರಾಜ್ಯದಲ್ಲಿ ಈಗಾಗಲೇ ಬಿರು ಬೇಸಿಗೆ ಆರಂಭ ಆಗಿದ್ದು, ಜನ ಜಾನುವಾರು ಕೃಷಿಗೆ ಸಾಕಷ್ಟು ನೀರಿಗೆ ಬೇಕಾಗುತ್ತದೆ. ಏಪ್ರಿಲ್ ಮೇ ತಿಂಗಳಿನಲ್ಲಿ ಬೇಸಿಗೆ ವಿಪರೀತ ಮಟ್ಟಕ್ಕೆ ಹೋಗುವ ಸಾಧ್ಯತೆ ಇದ್ದು ಈ ವೇಳೆ ಪ್ರಾಣಿ ಪಕ್ಷಿಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರಲಿದೆ. ಈ ಮಧ್ಯೆ ಬಂಡಿಪುರದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಭೀತಿ ಎದುರಾಗಲಿದೆಯೇ ಎಂಬ ಆತಂಕ ಶುರುವಾಗಲಿದೆ.
ದೇಶದ ಪ್ರತಿಷ್ಠಿತ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡಿಪುರದ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಅಭಾವ ಸದ್ಯಕ್ಕೆ ಇರಲ್ಲ. ಹೌದು ಶೇ 70 ರಷ್ಟು ಕೆರೆಗಳಲ್ಲಿ ಇನ್ನೂ ನೀರಿದ್ದು, ಅವಶ್ಯಕತೆ ಇರುವ ಕೆರೆಗಳಿಗೆ ಸೋಲಾರ್ ಪಂಪ್ ಮೂಲಕ ನೀರು ಸಪ್ಲೈ ಮಾಡಲು ಅರಣ್ಯ ಇಲಾಖೆ ಮುಂದಾಗಿದ್ದು, ಈ ಮೂಲಕ ಬಂಡೀಪುರದಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಿದೆ. ಇನ್ನು ಖಾಲಿಯಾದ ಕೆರೆಗಳಿಗೆ ಸೋಲಾರ್ ಪಂಪ್ ಸೆಟ್ ಮೂಲಕ ಪ್ರಾಣಿಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ಬಂಡೀಪುರ ಸಿ.ಎಫ್.ಒ ಪ್ರಭಾಕರ್, ಸದ್ಯಕ್ಕೆ ಬಂಡಿಪುರದ 70% ಕೆರೆಗಳಲ್ಲಿ ನೀರಿದೆ. ಖಾಲಿಯಾಗಿರುವ ಕೆರೆಗಳಿಗೆ ಸೋಲಾರ್ ಪಂಪ್ ಮತ್ತು ಟ್ಯಾಂಕರ್ ಗಳ ಮೂಲಕ ನೀರು ತುಂಬಿಸಲು ಸಿದ್ದರಾಗಿದ್ದೇವೆ. ಸದ್ಯಕ್ಕೆ ವನ್ಯಜೀವಿಗಳ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಿಲ್ಲ. ಈ ತಿಂಗಳು ಅಥವಾ ಮುಂದಿನ ತಿಂಗಳವರಗೆ ಮಳೆಯಾಗುವ ಸಾಧ್ಯತೆ ಇದೆ. ಅಲ್ಲಿವರೆಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
Key words: summer, Bandipur, wildlife, drinking water
The post ಬಿರು ಬೇಸಿಗೆ: ಬಂಡೀಪುರ ವನ್ಯಜೀವಿಗಳಿಗೆ ಎದುರಾಗುತ್ತಾ ಕುಡಿಯುವ ನೀರಿನ ಭೀತಿ..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.