ಮೈಸೂರು, ಮಾ.೧೧,೨೦೨೫: ಜನ ವಸತಿ ಪ್ರದೇಶದಲ್ಲಿ ಪರವಾನಗಿ ಎಲ್ಲ ಎಂದು ಅಂಗಡಿಯನ್ನೇ ತೆರವು ಮಾಡಲಾಗುತ್ತದೆ. ಅಂದ ಮೇಲೆ ಮಸೀದಿ ತೆಗೆಯಲು ಅನುಮತಿ ಹೇಗೆ ನೀಡಲಾಗುತ್ತದೆ ..? ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಎಂಪಿ ಹೇಳಿದಿಷ್ಟು…
ಕ್ಯಾತಮಾರನಹಳ್ಳಿ ರಾಜು ಸಾವನ್ನ ಮರೆತಿದ್ದೇವೆ ಅಂತ ಮಸೀದಿ ತೆರೆಯಲು ಮುಂದಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೇಳಿರುವಂತೆ ಕಾರ್ಯ ಮಾಡುತ್ತಿದ್ದಾರೆ. 1600 ಮಂದಿ ದುರುಳರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ವಾಪಸ್ ತೆಗೆದುಕೊಂಡಿದ್ದಕ್ಕೆ ಕೊಡಗಿನಲ್ಲಿ ಕುಟ್ಟಪ್ಪ, ಪಿರಿಯಾಪಟ್ಟಣದಲ್ಲಿ ಮಾಳಿಗೆ, ಮೈಸೂರಿನಲ್ಲಿ ಕ್ಯಾತಮಾರನಹಳ್ಳಿಯ ರಾಜು ಸೇರಿ ಹಲವರ ಮರ್ಡರ್ ಆಯ್ತು. ಜನ ವಸತಿ ಪ್ರದೇಶದಲ್ಲಿ ರಾಜು ಮರ್ಡರ್ ಆಯಿತು. ಕ್ರಿಮಿನಲ್‌ಪ್ರಕರಣ ವಾಪಸ್ ತೆಗೆದುಕೊಂಡಿದ್ದಕ್ಕೆ ಈ ಕೊಲೆ ಘಟನೆ ನಡೆದಿದೆ ಎಂದು ದೂಷಿಸಿದರು.
ಸವಾಲ್ :
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಾನು ಚಾಲೆಂಜ್ ಮಾಡ್ತೀನಿ, ಅನಧಿಕೃತ ಮಸೀದಿಯನ್ನ ಪುನಃ ಓಪನ್ ಮಾಡಿ ನೋಡೋಣಾ. ನಿಮಗೆ ಸಾಬ್ರು ಓಟ್ ಮಾತ್ರ ಬೇಕಾ? ಅವರು ಮಾತ್ರ ನಿಮಗೆ ಓಟ್ ಹಾಕ್ತಾರಾ? ನೀವು ಐದು ವರ್ಷ ಏನೂ ಮಾಡೋದಕ್ಕೆಆಗಲ್ಲ ಅಂತ ದರ್ಪತೋರಬೇಡಿ. ನಿಮ್ಮ ವಿರುದ್ಧ ಜನ ಬೇಸತ್ತಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ನಾವು ಮನವಿ ಮಾಡುತ್ತೇವೆ
ನೀವು ಸಿಎಂ ಇದ್ದೀರಿ? ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಇದ್ದೀನಿ, ಯಾರಿಗೆ ಗೆಲುವಾಗುತ್ತದೆ ನೋಡೋಣಾ? ಮಾಜಿ ಸಂಸದ ಹೇಳಿಕೆ.
key words: Udayagiri, Former BJP MP, objects to opening of mosque, Prathap Simha
The post ಉದಯಗಿರಿ : ಮಸೀದಿ ತೆರೆಯಲು ಬಿಜೆಪಿ ಮಾಜಿ ಎಂಪಿ ಆಕ್ಷೇಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.