14
Friday
March, 2025

A News 365Times Venture

ಮುಡಾ ಹಗರಣ: ಅಂತಿಮ ವರದಿ ಸಲ್ಲಿಸಿದ ಲೋಕಾಯುಕ್ತ ಎಸ್ಪಿ

Date:

ಮೈಸೂರು,ಫೆಬ್ರವರಿ,14,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ ಪಿ ಉದೇಶ್ ಅವರು ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ಐಜಿಪಿ ಸುಬ್ರಹ್ಮಣ್ಯೇಶ್ವರ್‌ ರಾವ್‌ ಅವರಿಗೆ 2500 ಕ್ಕೂ ಹೆಚ್ಚು ಪುಟಗಳ ಅಂತಿಮ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ವರದಿಯನ್ನ ಮತ್ತೊಮ್ಮೆ ಪರಿಶೀಲಿಸಲಿದ್ದು, ಚರ್ಚೆ, ಪರಿಶೀಲನೆ ಬಳಿಕ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರದಿಯನ್ನ ಸಲ್ಲಿಸಲಿದ್ದಾರೆ.  ಮುಡಾದ ಅಂತಿಮ ವರದಿಯ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.

ಹಗರಣ ಸಂಬಂಧ ವರದಿ ಸಲ್ಲಿಸಲು ಹೈಕೋರ್ಟ್‌ ಜನವರಿ 27ರ ಗಡುವು ನೀಡಿತ್ತು.  ಇತ್ತೀಚೆಗೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಅಂತಿಮ ವರದಿ ಸಲ್ಲಿಕೆಗೆ ಸೂಚನೆ ನೀಡಿತ್ತು.

ವರದಿಯಲ್ಲಿ ಏನಿದೆ?!

  1. ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಜಮೀನು‌ ಹೇಗೆ ವರ್ಗಾವಣೆ ಆಗಿದೆ.
  2. 25 ಕ್ಕೂ ಹೆಚ್ಚು ಮಂದಿಯ ವಿಚಾರಣೆಯ ಹೇಳಿಕೆಗಳು.
  3. ದೂರುದಾರ ಸ್ನೇಹಮಯಿ ಕೃಷ್ಣ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ವರದಿ.
  4. ದೂರುದಾರ ಸ್ನೇಹಮಯಿ ಕೃಷ್ಣ ಅವರ ಹೇಳಿಕೆಗಳು.
  5. ದೂರುದಾರ ಸ್ನೇಹಮಯಿ ಕೃಷ್ಣ ಅವರು ನೀಡಿದ್ದ ಹಲವು ದಾಖಲೆಗಳು.
  6. ಕೆಸರೆಯ ಸರ್ವೆ ನಂ.464 ರ 3.16 ಎಕರೆ ಜಮೀನು ಕುರಿತ ದಾಖಲೆಗಳು.
  7. ವಿಜಯನಗರದಲ್ಲಿ ಬದಲಿಯಾಗಿ ನೀಡಿದ್ದ 14 ಸೈಟ್ ಗಳ ದಾಖಲೆಗಳು.
  8. ಪ್ರಕರಣದ ಮೊದಲ ಆರೋಪಿ ಸಿದ್ದರಾಮಯ್ಯ, ಎರಡನೇ ಆರೋಪಿ ಅವರ ಪತ್ನಿ ಬಿ.ಎನ್.ಪಾರ್ವತಿ, ಮೂರನೇ ಆರೋಪಿ ಬಾಮೈದ ಮಲ್ಲಿಕಾರ್ಜುನ ನಾಲ್ಕನೇ ಆರೋಪಿ ದೇವರಾಜು ಅವರ ಹೇಳಿಕೆಗಳು.
  9. ಮುಡಾದ ಹಾಲಿ ಅಧಿಕಾರಿಗಳ ಹೇಳಿಕೆಗಳು.
  10. ಮುಡಾದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳ ಹೇಳಿಕೆಗಳು.
  11. ಎಫ್‌ಎಸ್ ಎಲ್ ರಿಪೋರ್ಟ್.
  12. ಡಿವಿಆರ್, ಡಿವಿಡಿ, ಪೆನ್ ಡ್ರೈವ್ ಗಳಲ್ಲಿಯೂ ಮಾಹಿತಿ ಸಂಗ್ರಹದ ಲಕೋಟೆ.
  13. ನಕ್ಷೆಗಳು, ಮುಡಾ, ಸಬ್ ರಿಜಿಸ್ಟರ್ ಕಚೇರಿಯಲ್ಲಿದ್ದ ಮೂಲ‌ದಾಖಲೆಗಳ ವರದಿ.
  14. ಮುಡಾದ ದಾಖಲೆಗಳನ್ನ ತಿದ್ದಿದ್ದಾರೆ ಎನ್ನಲಾಗಿದ್ದ ದಾಖಲೆಗಳು.
  15. ಲೋಕಾಯುಕ್ತ ಎಸ್ಪಿ‌ ಸೇರಿ ಹಲವರ ಉಲ್ಲೇಖಗಳು.

ಇನ್ನಿತರೆ ಮಹತ್ತರ ಹೇಳಿಕೆಗಳ ದಾಖಲು ಮಾಡಲಾಗಿದೆ.

Key words: Muda scam, Lokayukta SP,  submits, final report

The post ಮುಡಾ ಹಗರಣ: ಅಂತಿಮ ವರದಿ ಸಲ್ಲಿಸಿದ ಲೋಕಾಯುಕ್ತ ಎಸ್ಪಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನಕಲಿ ಔಷಧಿ ಜಾಲ ತಡೆಗಟ್ಟಲು ಕ್ರಮ -ಸಚಿವ  ದಿನೇಶ್ ಗುಂಡೂರಾವ್

  ಬೆಂಗಳೂರು, ಮಾರ್ಚ್ 13,2025:  ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲವನ್ನು...

വാഹനാപകടത്തില്‍ വ്‌ളോഗര്‍ ജുനൈദ് മരിച്ചു

മലപ്പുറം: തൃക്കലങ്ങോട് മരത്താണിയില്‍ ബൈക്ക് മറിഞ്ഞ് വ്‌ളോഗര്‍ ജുനൈദ് (32)മരിച്ചു. റോഡരികിലെ...

'Senthil Balaji-க்கு, இனி ஒவ்வொரு நிமிடமும் ஷாக்தான்' – நெருக்கும் ED | Elangovan Explains

இளங்கோவன் எக்ஸ்பிளைன்சில்,டாஸ்மாக் துறையில் ரூ 1000/- கோடி ரூபாய்க்கு மேல் முறைகேடு...

Top Headlines @9PM : టాప్‌ న్యూస్‌

పవన్ అన్న అంటూ లోకేష్ ట్వీట్.. మంత్రి స్పెషల్ విషెస్ జనసేన 12వ...