17
Monday
March, 2025

A News 365Times Venture

ಬೆಂಗಳೂರಿನಲ್ಲಿ ವೈಮಾನಿಕ ಮಹಾ ಕುಂಭಮೇಳ: ಏರ್ ಶೋ ಉದ್ಘಾಟಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ನುಡಿ

Date:

ಬೆಂಗಳೂರು,ಫೆಬ್ರವರಿ,10,2025 (www.justkannada.in):  ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಅಧ್ಯಾತ್ಮದ ಮಹಾಕುಂಭ ಮೇಳ ನಡೆಯುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ದೋಪಕರಣಗಳ ವಿಮಾನ ಹಾರಾಟ ನಡೆಯುತ್ತಿದೆ. ವೈಮಾನಿಕ ಮಹಾ ಕುಂಭಮೇಳ ನಡೆಯುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ 2025  ಉದ್ಘಾಟಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬೆಂಗಳೂರಿನ ವಾಯುನೆಲೆಯಲ್ಲಿ ಏರ್ ಶೋ,  ಒಂದು ಕಡೆ ಪರಂಪರೆ ಸಂಸ್ಕೃತಿಯ ಮಹಾಕುಂಭ ಆಗುತ್ತಿದೆ. ಇನ್ನೊಂದೆಡೆ ತಂತ್ರಜ್ಞಾನದ ಯುದ್ದೋಪಕರಣಗಳ ವಿಮಾನ ಹಾರಾಟ. ಹೊಸ ಸವಾಲಿಗೆ ಉತ್ತರ ಹುಡುಕುವ ಕೆಲಸ ಆಗಬೇಕಿದೆ. ಶಾಂತಿ ಶಕ್ತಿ ನಮ್ಮ ಮಂತ್ರಬಲ ಆಗಬೇಕಿದೆ   ಬಲಾಢ್ಯರಾಗಿ ವಿಶ್ವದಲ್ಲಿ ನಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ.  ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ.  10 ವರ್ಷಗಳಿಂದ ವೈಮಾನಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ  ಮಾಡಲಾಗಿದೆ. ಬಜೆಟ್ ನಲ್ಲಿ 1080 ಲಕ್ಷ ಕೋಟಿ ಅನುದಾನವನ್ನ ಮೀಸಲಿಡಲಾಗಿದೆ ಎಂದರು.

ಏರೋ ಸ್ಪೇಸ್ ಮೂಲಕವೂ ಬೆಂಗಳೂರು ಹೆಸರುವಾಸಿಯಗುತ್ತಿದೆ.   ಅಂತರಂಗದ ಆಧ್ಯಾತ್ಮ ಶಕ್ತಿ ಪ್ರದರ್ಶನ ಆ ಕುಂಭಮೇಳದಲ್ಲಿ ನಡೆಯುತ್ತಿದ್ದರೆ, ಇದು ವಾಯುನೆಲೆಯಲ್ಲಿ ನಮ್ಮ ಬಹಿರಂಗ ಶಕ್ತಿ ಪ್ರದರ್ಶನ ಎಂದು ನುಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ , ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಉಪಸ್ಥಿತರಿದ್ದರು.

Key words: Air show, Bengaluru, Defence Minister, Rajnath Singh

The post ಬೆಂಗಳೂರಿನಲ್ಲಿ ವೈಮಾನಿಕ ಮಹಾ ಕುಂಭಮೇಳ: ಏರ್ ಶೋ ಉದ್ಘಾಟಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ನುಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

CM Chandrababu : ఈ నెల 18న ఢిల్లీకి సీఎం చంద్రబాబు

CM Chandrababu : ఏపీ ముఖ్యమంత్రి చంద్రబాబు నాయుడు (AP CM...

ಗೋಲ್ಡ್ ಸ್ಮಗ್ಲಿಂಗ್ ಕೇಸ್:ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ ನಟಿ ರನ್ಯಾರಾವ್

ಬೆಂಗಳೂರು,ಮಾರ್ಚ್,15,2025 (www.justkannada.in):   ಚಿನ್ನಕಳ್ಳ ಸಾಗಾಣೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ...

കേരളത്തില്‍ ഒറ്റപ്പെട്ടയിടങ്ങളില്‍ ഇടിമിന്നലോടുകൂടിയ മഴയ്ക്ക് സാധ്യത

തിരുവനന്തപുരം: സംസ്ഥാനത്ത് ഒറ്റപ്പെട്ടയിടങ്ങളില്‍ ഇന്നും നാളെയും 16.03.25, 17.03.25 തിയതികളില്‍ ഇടിമിന്നലോടു...

`புத்தாண்டு, ஹோலி…' அடிக்கடி வியட்நாம் செல்லும் ராகுல் காந்தி; காரணம் கேட்கும் பாஜக

மத்திய எதிர்க்கட்சித் தலைவர் ராகுல் காந்தி தற்போது தனிப்பட்ட பயணமாக வியட்நாம்...