25
Tuesday
February, 2025

A News 365Times Venture

ಅಕ್ರಮ ಆಸ್ತಿ ಗಳಿಕೆ : ಬಿಲ್ ಕಲೆಕ್ಟರ್ ಗೆ  3 ವರ್ಷ ಕಠಿಣ ಶಿಕ್ಷೆ, 50 ಲಕ್ಷ ರೂ. ದಂಡ

Date:

ಬೆಂಗಳೂರು,ಗ್ರಾಮಾಂತರ ಜನವರಿ, 28,2025 (www.justkannada.in): ಸರ್ಕಾರಿ ಸೇವಾವಧಿಯಲ್ಲಿ ತನ್ನ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆಂಬ  ಮಾಹಿತಿಯ ಆಧಾರದ ಮೇಲೆ ಚಿಕ್ಕಜಾಲ ಬಿಲ್ ಕಲೆಕ್ಟರ್  ಕೃಷ್ಣಪ್ಪ ಅವರಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50.20 ಲಕ್ಷ ದಂಡ ಮತ್ತು ದಂಡ ಕಟ್ಟಲು ವಿಫಲರಾದಲ್ಲಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಇನ್ಸ್‌ ಪೆಕ್ಟ‌ರ್ ಎಂ.ಜೆ. ದಯಾನಂದ್ ಅವರು ನೀಡಿದ ಸೋರ್ಸ್ ವರದಿಯ ಆಧಾರದ ಮೇಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೋಕಾಯುಕ್ತ ಪೊಲೀಸ್ ಉಪಾಧಿಕ್ಷಕರಾದ ವಿಜಯ್‌ ಕುಮಾರ್ ಅವರು ಪ್ರಕರಣವನ್ನು ದಾಖಲಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಎನ್. ನವೀನ್ ಕುಮಾರ್ ಅವರು,  ಆರೋಪಿತ ಕೃಷ್ಣಪ್ಪ ತನ್ನ ಹಾಗೂ ತನ್ನ ಕುಟುಂಬದವರ ಹೆಸರಿನಲ್ಲಿ ರೂ. 63,66,528 (400.78%) ಗಳಷ್ಟು ಹೆಚ್ಚುವರಿ ಆಸ್ತಿಯನ್ನು ಗಳಿಸಿರುವ ಬಗ್ಗೆ ಸಿಸಿಹೆಚ್-24 ಬೆಂಗಳೂರು ನಗರ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿ ವಿಚಾರಣೆ ನಡೆಸಲಾಗಿತ್ತು.

ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಆರೋಪಿತರು ತನ್ನ ಹಾಗೂ ತನ್ನ ಕುಟುಂಬದವರ ಹೆಸರಿನಲ್ಲಿ ಅಕ್ರಮ ಆಸ್ತಿಯನ್ನು ಹೊಂದಿರುವುದು ವಿಚಾರಣೆಯಿಂದ ದೃಢಪಟ್ಟ ಕಾರಣ 2025 ರ ಜನವರಿ 27ರಂದು ತೀರ್ಪು ಪ್ರಕಟಿಸಿ, ಆರೋಪಿತರಿಗೆ 03 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಮತ್ತು 50,20,000/-ರೂ ದಂಡ ಮತ್ತು ದಂಡ ಕಟ್ಟಲು ವಿಫಲರಾದಲ್ಲಿ 06 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನ್ಯಾಯಾಲಯ ತೀರ್ಪು ನೀಡಿದೆ ಎಂದು ಲೋಕಾಯುಕ್ತ ಎಸ್.ಪಿ ಪವನ್ ನೆಜ್ಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Bill collector, sentenced, 3 years, imprisonment, fine

The post ಅಕ್ರಮ ಆಸ್ತಿ ಗಳಿಕೆ : ಬಿಲ್ ಕಲೆಕ್ಟರ್ ಗೆ  3 ವರ್ಷ ಕಠಿಣ ಶಿಕ್ಷೆ, 50 ಲಕ್ಷ ರೂ. ದಂಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Konda Surekha : మహా శివరాత్రి ఏర్పాట్లపై మంత్రి కొండా సురేఖ సమీక్ష.. అధికారులకు కీలక ఆదేశాలు

Konda Surekha : మహా శివరాత్రి పర్వదినాన్ని పురస్కరించుకుని రాష్ట్ర వ్యాప్తంగా...

ರೇಣುಕಾಸ್ವಾಮಿ ಕೊಲೆ ಕೇಸ್: ವಿಚಾರಣೆ ಏ.8ಕ್ಕೆ ಮುಂದೂಡಿದ ಕೋರ್ಟ್

ಬೆಂಗಳೂರು,ಫೆಬ್ರವರಿ,25,2025 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 57ನೇ ಸಿಸಿಹೆಚ್...

സിഖ് വിരുദ്ധകലാപക്കേസ്; മുന്‍ കോണ്‍ഗ്രസ് എം.പി സജ്ജന്‍ കുമാറിന് ജീവപര്യന്തം

ന്യൂദല്‍ഹി: സിഖ് വിരുദ്ധ കലാപക്കേസില്‍ കോണ്‍ഗ്രസ് മുന്‍ എം.പി സജ്ജന്‍ കുമാറിന്...